fbpx

Please assign a menu to the primary menu location under menu

ರೈಲು ಡಿಕ್ಕಿ ಹೊಡೆದ ರಭಸಕ್ಕೆ ಚೆಲ್ಲಾಪಿಲ್ಲಿಯಾದ ಬೃಹತ್ ಟ್ರಕ್! ಭೀಕರ ಅಪಘಾತದ ವಿಡಿಯೋ ಇಲ್ಲಿದೆ ನೋಡಿ

ಸೋಶಿಯಲ್ ಮಿಡಿಯಾದಲ್ಲಿ ನಾವು ಸಾಕಷ್ಟು ಅಪಘಾತದ ದೃಶ್ಯಗಳನ್ನು ನೋಡುತ್ತಿರುತ್ತೇವೆ. ಇದೀಗ ಇಂತಹದ್ದೆ ಭಯಾನಕ ಅಪಘಾತದ ವಿಡಿಯೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಬೆಚ್ಚಿಬೀಳಿಸುವಂತಿದೆ.

ಟ್ರಕ್ ಹಾಗೂ ಟ್ರೈನ್ ನಡುವೆ ಸಂಭವಿಸಿದ ಭೀಕರ ಅಪಘಾತದ ವೀಡಿಯೋ ಇದಾಗಿದ್ದು, ವಿಂಡ್ ಟರ್ಬೈನ್ ಬ್ಲೇಡ್ ಅನ್ನು ಹೊತ್ತು ತರುತ್ತಿದ್ದ ಟ್ರಕ್ ರೈಲ್ವೇ ಹಳಿಯನ್ನು ಕ್ರಾಸಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ರೈಲು ಟ್ರಕ್‌ಗೆ ಅಪ್ಪಳಿಸಿರೋದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ಘಟನೆ ನಡೆದಿರೋದು ಟೆಕ್ಸಾಸ್‌ನ ಲುಲ್ಲಿಂಗ್ ನಗರದಲ್ಲಿ, ವಿಂಡ್ ಟರ್ಬೈನ್ ಬ್ಲೇಡ್ ಹೊತ್ತು ಸಾಗುತ್ತಿದ್ದ 18 ಚಕ್ರಗಳ ಬೃಹತ್ ಗಾತ್ರದ ಟ್ರಕ್ ರೈಲ್ವೇ ಗೇಟ್‌ ಅನ್ನು ನಿಧಾನಕ್ಕೆ ದಾಟುತ್ತಿದ್ದಂತೆ ವೇಗವಾಗಿ ಬಂದ ರೈಲು ಟ್ರಕ್‌ಗೆ ಅಪ್ಪಳಿಸಿದೆ.

ಇನ್ನೇನು ಟ್ರಕ್ ಹಳಿ ದಾಟಬೇಕು ಎನ್ನುವಷ್ಟರಲ್ಲಿ ರೈಲ್ವೆ ಗೇಟ್ ಕೂಡ ಹಾಕಲಾಗಿದ್ದು, ಬೃಹತ್ ವಿಂಡ್ ಟರ್ಬೇನ್ ಬ್ಲೇಡ್ ಇದ್ದ ಕಾರಣ ಟ್ರಕ್ ಚಾಲಕನಿಗೆ ನಿರೀಕ್ಷೆ ಮಾಡಿದಷ್ಟು ವೇಗದಲ್ಲಿ ಹಳಿ ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ, ರೈಲು ಬಂದು ಟ್ರಕ್‌ಗೆ ಡಿಕ್ಕಿ ಹೊಡೆದು ವಿಂಡ್ ಟರ್ಬ್ರೈನ್ ಬ್ಲೇಡ್ ತುಂಡಾಗಿ ಹೋಗಿತ್ತು.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ಟ್ರಕ್ ಕೂಡಾ ಉರುಳಿ ಬಿದ್ದಿತ್ತು. ಸದ್ಯ ಈ ದುರಂತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!