fbpx

ಕಾರು ಚಾಲಕನ ಆವಾಂತರಕ್ಕೆ ಸುಟ್ಟು ಬೂದಿಯಾಯಿತು ಕಾರು! ಶಾಕಿಂಗ್ ವಿಡಿಯೋ ನೋಡಿ

ಕರೋನಾ ಸಾಂಕ್ರಾಮಿಕದ ನಂತರ ಜನರ ದೈನಂದಿನ‌ ಜೀವನ ಅಸ್ಥವ್ಯಸ್ತವಾಗಿ ಹೋಗಿದೆ. ಸಾರ್ವಜನಿಕ ಪ್ರದೇಶಗಳಿಗೆ ಹೋಗುವಾಗ ಮಾಸ್ಕ್ ಧರಿಸೋದು, ಸ್ಯಾನಿಟೈಸರ್ ಬಳಸೋದು ಸರ್ವೇ ಸಾಮಾನ್ಯವಾಗಿದೆ‌.

ಬಹುತೇಕರು ತಮ್ಮ ಸುರಕ್ಷತೆಗಾಗಿ ಸ್ಯಾನಿಟೈಸರನ್ನು ತಮ್ಮ ವಾಹನಗಳಲ್ಲೇ ಇಟ್ಟುಕೊಂಡು ತಮಗೆ ಅಗತ್ಯ ಬಿದ್ದಾಗೆಲ್ಲ ಬಳಸುತ್ತಾರೆ. ಆದರೆ ಸ್ಯಾನಿಟೈಸರನ್ನು ಬಳಸುವಾಗ ಕೆಲವರು ಅಜಾಗೃತೆ ತೋರಿ ಸಂಕಷ್ಟಕ್ಕೆ ಗುರಿಯಾದ ಸಾಕಷ್ಟು ಘಟನೆಗಳು ನಡೆದಿದೆ. ಇದೀಗ ಇಂತಹದ್ದೇ ಒಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಅಮೇರಿಕಾದ ವಾಷಿಂಗ್ಟನ್‌ನ ರಾಕ್‌ವಿಲ್ಲೆ ಎಂಬಲ್ಲಿ 66ವರ್ಷದ ಕಾರುಚಾಲಕರೊಬ್ಬರು ಸ್ಯಾನಿಟೈಸರ್ ಬಳಸುವಾಗ ತೋರಿದ ನಿರ್ಲಕ್ಷ್ಯತೆ ಅವರ ಇಡೀ ಕಾರನ್ನು ಸುಟ್ಟು ಕರಕಲು ಮಾಡಿದೆ. ತಮ್ಮ ಟೊಯೋಟ ಕ್ಯಾಮ್ರಿ ಕಾರಿನ ಮೂಲಕ ಶಾಪಿಂಗ್ ಮಾಡಲು ಹೊರಬಂದಿದ್ದ ವ್ಯಕ್ತಿ ಸಿಗರೇಟು ಸೇದುತ್ತಾ ಕೈಗೆ ಸ್ಯಾನಿಟೈಸರ್ ಹಾಕಿದ್ದೇ ಅವಘಡಕ್ಕೆ ಕಾರಣ.

ತಾನು ಸಿಗರೇಟ್ ಬಾಯಲ್ಲಿ ಇಟ್ಟುಕೊಂಡಿರೋ ಬಗ್ಗೆ ಮರೆತು ಬಿಟ್ಟಿದ್ದ ಆಸಾಮಿ ಸ್ಯಾನಿಟೈಸರ್ ಕೈಗೆ ಸ್ಪ್ರೇ ಮಾಡಿದ್ದು ಏಕಾಏಕಿ ಅವರ ಬಟ್ಟೆಗೆ ಬೆಂಕಿ ಹತ್ತಿಕೊಂಡು ಇಡೀ ಕಾರಿಗೆ ವ್ಯಾಪಿಸಿದೆ. ತಕ್ಷಣ ಅವರು ಕಾರಿನಿಂದ ಹಾರಿ ಪ್ರಾಣ ರಕ್ಷಿಸಿಕೊಂಡಿದ್ದು, ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ತಕ್ಷಣ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರೂ ಕಾರು ಅಷ್ಟರಲ್ಲಾಗಲೇ ಸುಟ್ಟು ಬಸ್ಮವಾಗಿತ್ತು. ವ್ಯಕ್ತಿಯು ಸಣ್ಣಪುಟ್ಟ ಸುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ವೈರಲ್ ವಿಡಿಯೋ ನೋಡಿ,

Watch Video

video

error: Content is protected !!