fbpx

ಮಸೀದಿಯ ಗೋಡೆಯ ಮೇಲೆ ‘ಜೈ ಶ್ರೀರಾಮ್’ ಬರಹ, ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರಿಗೇ ಶಾಕ್! ವೈರಲ್ ವಿಡಿಯೋ ನೋಡಿ

ಮಸೀದಿಯ ಗೋಡೆಗಳ ಮೇಲೆ ‘ಜೈ ಶ್ರೀ ರಾಮ್’ ಬರೆಯುವ ಮೂಲಕ ಕೋಮುಗಲಭೆ ಎಬ್ಬಿಸಲು ಯತ್ನಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದಿರೋದು ತೆಲಂಗಾಣದ ಭೈನ್ಸಾದಲ್ಲಿ, ಬಂಧಿತರನ್ನು ಮೊಹಮ್ಮದ್ ಅಬ್ದುಲ್ ಕೈಫ್ 20 ವರ್ಷ ಮತ್ತು ಹೆಸರಿಸದ ಅಪ್ರಾಪ್ತ ವಯಸ್ಕ 14 ವರ್ಷ ಎಂದು ಗುರುತಿಸಲಾಗಿದೆ.

ಈ ಭೈನ್ಸಾ ವ್ಯಾಪ್ತಿಯಲ್ಲಿ ಕಳೆದ ಕೆಲ ಸಮಯಗಳಿಂದ ಮುಸ್ಲಿಂ ಮತಾಂಧರು ಕ್ಷುಲ್ಲಕ ಕಾರಣಗಳನ್ನಿಟ್ಟುಕೊಂಡು ಪದೇಪದೇ ಹಿಂದೂ ಸಮುದಾಯದ ಮೇಲೆ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಕಳೆದ ಮೇ26 ರಂದು ರಾತ್ರೋರಾತ್ರಿ ಯಾರೋ ದುಷ್ಕರ್ಮಿಗಳು ಮಸೀದಿಯೊಂದರ ಗೋಡೆಯ ಮೇಲೆ ಜೈಶ್ರೀರಾಮ್ ಎಂದು ಬರೆದಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಬೆಳಗ್ಗೆ ಸುದ್ದಿ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಮುಸ್ಲಿಂ ಸಮುದಾಯ ಈ ಘಟನೆಯ ಆರೋಪವನ್ನು ಅಮಾಯಕ ಹಿಂದೂಗಳ ಮೇಲೆ ಹೊರಿಸಿ ಕೋಮುಗಲಭೆ ಎಬ್ಬಿಸಲು ಯತ್ನಿಸಿದ್ದರು. ಆದರೆ ಪೋಲೀಸರ ಸಮಯಪ್ರಜ್ಞೆಯಿಂದ ಬಹುದೊಡ್ಡ ಅನಾಹುತ ತಪ್ಪಿಹೋಗಿತ್ತು.

ತಕ್ಷಣ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ಭೈನ್ಸಾ ಎಎಸ್ಪಿ ಕಿರಣ್ ಖರೆ ಅವರು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು ಇಬ್ಬರೂ ಮಸೀದಿಯ ಅಕ್ಕಪಕ್ಕದ ನಿವಾಸಿಗಳು ಎಂದು ತಿಳಸಿದ್ದಾರೆ.

ಮಸೀದಿಯ ಮೌಲ್ವಿ ಹಾಗೂ ಹಿರಿಯರ ಅದೇಶದ ಮೇರೆಗೆ ನಾವು ಈ ಕೃತ್ಯ ಎಸಗಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಬಂಧಿತ ಅಪ್ರಾಪ್ತ ಹುಡುಗನೇ ಮಸೀದಿಯ ಗೋಡೆಯಲ್ಲಿ ‘ಜೈಶ್ರೀರಾಮ್’ ಎಂದು ಬರೆದಿದ್ದು ಎಂದು ಆರೋಪಿ ಹೇಳಿದ್ದಾನೆ. ಅಲ್ಲದ ಸಿಸಿಟಿವಿ ದೃಶ್ಯಾವಳಿಗಳ ಜೊತೆ ಆರೋಪಿಯ ಕೈಬರಹವೂ ಗೋಡೆಯ ಬರಹಕ್ಕೆ ಹೊಂದಿಕೆಯಾಗುತ್ತದೆ. ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ಜೈ ಶ್ರೀರಾಮ್’ ಎಂಬ ಶಬ್ದವನ್ನು ಈಗೀಗ ಎಲ್ಲಾ ಘಟನೆಗಳ ಜೊತೆ ತಳುಕು ಹಾಕಲಾಗುತ್ತಿದೆ. ಯಾವೇ ಕಾರಣಕ್ಕೆ ಮುಸ್ಲಿಮ್ ವ್ಯಕ್ತಿಗಳ ಹತ್ಯೆಯಾದ್ರೂ ಅಲ್ಲಿ ‘ಜೈ ಶ್ರೀರಾಮ್’ ಎಂಬ ಪದವನ್ನು ಎಳೆದು ತರೋದು ಮಾಮೂಲಾಗಿದೆ. ಕೆಲದಿನಗಳ ಹಿಂದಷ್ಟೇ ಹರ್ಯಾಣದಲ್ಲಿ ಗ್ಯಾಂಗ್‌ವಾರ್‌ನಲ್ಲಿ ಸತ್ತ ಮುಸ್ಲಿಂ ಗೂಂಡಾ ಒಬ್ಬನ ಪ್ರಕರಣದಲ್ಲೂ ‘ಜೈ ಶ್ರೀರಾಮ್’ ಎಂದು ಹೇಳದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ಸುಳ್ಳು ಆರೋಪ ಹೊರಿಸಲಾಗಿತ್ತು.

ಇದೊಂದು ಕಾಣದ ‘ಕೈ’ಗಳ ದೊಡ್ಡ ಶಡ್ಯಂತ್ರ ಎಂಬುದು ಈ ಘಟನೆಯಿಂದ ತಿಳಿದುಬರುತ್ತಿದೆ. ಒಂದು ವೇಳೆ ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಇಲ್ಲದೆ ಹೋಗಿದ್ದರೆ, ಈ ಆರೋಪವನ್ನೂ ಸ್ಥಳೀಯ ಹಿಂದೂಗಳ ಮೇಲೆ ಹೊರಿಸಿ ಕೋಮುಗಲಭೆ ನಡೆಸುವ ತಯಾರಿ ನಡೆದಿತ್ತು‌ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

video

error: Content is protected !!