fbpx

ಈ ಪುಟ್ಟ ಬಾಲಕನೆ ನನ್ನ ಗುರು ಎಂದ ಐಎಎಸ್ ಅಧಿಕಾರಿ, ಕಾರಣವೇನು ಗೊತ್ತೇ? ವೈರಲ್ ವಿಡಿಯೋ ನೋಡಿ

ಐಎಎಸ್ ಅಧಿಕಾರಿ ಎಂ.ವಿ.ರಾವ್ ಅವರು ಪೋಸ್ಟ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟ್ಟ ಬಾಲಕನೊಬ್ಬ ಸ್ಥಂಭವೊಂದನ್ನು ಏರಲು ಪ್ರಯತ್ನಿಸುತ್ತಿರುವ ವಿಡಿಯೋ ಇದಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೋದಲ್ಲಿರುವ ಪುಟ್ಟ ಬಾಲಕ ಲಿವರ್‌ಪೂಲ್ ಫುಟ್ಬಾಲ್ ಅಕಾಡೆಮಿಯಲ್ಲಿ ಟ್ರೈನಿಂಗ್ ಪಡೆಯುತ್ತಿರುವ ಅರಾತ್ ಹೊಸೇನಿ ಎಂದು ತಿಳಿದುಬಂದಿದೆ. ಈ ವಿಡಿಯೋದಲ್ಲಿ ಏಳು ವರ್ಷದ ಈ ಪುಟಾಣಿ ಫುಟ್ಬಾಲರ್‌‌ ಬಹಳ ಪ್ರಯಾಸಪಟ್ಟು, ಮರಳಿ ಪ್ರಯತ್ನ ಮಾಡುತ್ತಾ ಸ್ಥಂಭದ ಮೇಲೇರುವುದನ್ನು ನೋಡಬಹುದಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಎಂ.ವಿ.ರಾವ್ “ಈ ಮಗು ನನ್ನ ಗುರು” ಎಂದು ಬರೆದಿದ್ದಾರೆ. ಸದ್ಯ ಈ ವಿಡಿಯೋ ಮೈಕ್ರೋಬ್ಲಾಗಿಂಗ್ ತಾಣದಲ್ಲಿ ವೈರಲ್ ಆಗಿದೆ.

Watch Video

video

error: Content is protected !!