fbpx

ಹಾಡುಹಗಲೆ ವೈದ್ಯ ದಂಪತಿಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು, ಶಾಕಿಂಗ್ ವಿಡಿಯೋ ನೋಡಿ

ದೇಶ ಒಂದು ಕಡೆ ಕರೋನಾ ಸಂಕಷ್ಟದಲ್ಲಿದ್ದರೆ ಇನ್ನೊಂದು ಕಡೆ ಪಾತಕಿಗಳ ಅಟ್ಟಹಾಸ ದಿನೇದಿನೇ ಹೆಚ್ಚಾಗುತ್ತಿದೆ. ಇದೀಗ ರಾಜಸ್ಥಾನದ ಭರತ್‌ಪುರದಲ್ಲಿ ಹಾಡುಹಗಲೇ ವೈದ್ಯ ದಂಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಶುಕ್ರವಾರದಂದು ನಡೆದಿದೆ.

ಹತ್ಯೆಯಾದ ವೈದ್ಯ ದಂಪತಿಯನ್ನು ಡಾ.ಸುದೀಪ್ ಗುಪ್ತಾ ಹಾಗೂ ಅವರ ಪತ್ನಿ ಡಾ.ಸೀಮಾ ಗುಪ್ತಾ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಭರತ್‌ಪುರದ ನೀಮ್ದಾ ಗೇಟ್ ಏರಿಯಾ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದಂಪತಿ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಬೈಕ್‌ನಲ್ಲಿ ವೇಗವಾಗಿ ಬಂದ ದುಷ್ಕರ್ಮಿಗಳು ದಂಪತಿ ಸಾಗುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಾರಿನ ಡ್ರೈವರ್ ಸೀಟ್ ಬಳಿ ತೆರಳಿದ ಓರ್ವ ದುಷ್ಕರ್ಮಿ ತನ್ನ ಸೊಂಟದಲ್ಲಿ ಇರಿಸಿದ್ದ ರಿವಾಲ್ವರ್ ತೆಗೆದು ದಂಪತಿ ಮೇಲೆ ಐದು ಸುತ್ತು ಗುಂಡು ಹಾರಿಸಿದ್ದಾನೆ. ಗುಂಡೇಟು ತಿಂದ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ದಂಪತಿಗಳು ಸತ್ತರೋದನ್ನು ಖಚಿತಪಡಿಸಿಕೊಂಡ ದುಷ್ಕರ್ಮಿಗಳು ಅಲ್ಲಿ ಇದ್ದ ಇತರ ವಾಹನ ಸವಾರರತ್ತ ಗನ್ ತೋರಿಸಿ ಬೆದರಿಸಿ ಬೈಕ್ ಏರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೋಲೀಸರು ತಿಳಿಸಿದ್ದು, ಮೃತ ವೈದ್ಯ ದಂಪತಿಗಳು ಕೊಲೆ ಪ್ರಕರಣವೊಂದರ ಆರೋಪಿಗಳು ಎಂದು ತಿಳಿದುಬಂದಿದೆ.

ಈ ಹಿಂದೆ ದೀಪಾ ದೇವಿ ಎಂಬ 25 ವರ್ಷದ ಮಹಿಳೆ ಹಾಗೂ ಆಕೆಯ 6 ವರ್ಷದ ಮಗನ ಕೊಲೆ ಪ್ರಕರಣ ಸಂಬಂಧ 2019ರಲ್ಲಿ ಸುದೀಪ್ ಹಾಗೂ ಸೀಮಾರನ್ನ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ದಂಪತಿ ಹೊರಬಂದಿದ್ದರು. ಕೊಲೆಯಾಗಿದ್ದ ಮಹಿಳೆಗೆ ಡಾ.ಸುದೀಪ್ ಜೊತೆ ಅಕ್ರಮ ಸಂಬಂಧವಿತ್ತೆಂದು ಆಗ ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿತ್ತು.

ಆರಂಭದಲ್ಲಿ ಈ ಹತ್ಯೆ ಪ್ರಕರಣದ ಆರೋಪದ ಮೇಲೆ ಡಾ.ಸೀಮಾ ಅವರನ್ನು ಬಂಧಿಸಲಾಗಿತ್ತು. ನಂತರ ಪೊಲೀಸರು ಆಕೆಯ ಪತಿ ಡಾ.ಸುದೀಪ್ ಅವರನ್ನು ಪಿತೂರಿ ಆರೋಪದಡಿ ಬಂಧಿಸಿದ್ದರು. ಅದೇ ಪ್ರಕರಣ ಸಂಬಂಧ ಸುದೀಪ್ ದಂಪತಿಯ ಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ದೃಶ್ಯ ಟ್ರಾಫಿಕ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಎದೆ ಝಲ್ಲೆನಿಸುವಂತಿದೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಭರತ್ಪುರ್ ಸರ್ಕಲ್ ಆಫೀಸರ್ ಸತೀಶ್ ವರ್ಮಾ ತಿಳಿಸಿದ್ದಾರೆ.

Watch Video

video

error: Content is protected !!