fbpx

Please assign a menu to the primary menu location under menu

ಮುಳುಗಡೆಯಾಯಿತು ವಿಶ್ವವಿಖ್ಯಾತ ಪಂಪ್‌ವೆಲ್ ಮೇಲ್ಸೇತುವೆ, ಬಿಜೆಪಿ ರಾಜ್ಯಾಧ್ಯಕ್ಷನ ಸಾಧನೆ ಒಂದೇ ವರ್ಷದಲ್ಲಿ ಬಹಿರಂಗ! ವೈರಲ್ ವಿಡಿಯೋ ನೋಡಿ

ಅತಿಹೆಚ್ಚು ಬಾರಿ ಟ್ರೋಲ್ಗೊಳಗಾಗಿದ್ದ ಪಂಪ್‌ವೆಲ್ ಮೇಲ್ಸೇತುವೆ ಇದೀಗ ಸ್ವಿಮ್ಮಿಂಗ್ ಪೂಲ್ ಆಗಿ ಬದಲಾಗಿದೆ. ಬರೋಬ್ಬರಿ 10 ವರ್ಷಗಳ ಕಾಮಗಾರಿಯ ನಂತರ ವರ್ಷದ ಹಿಂದೆ ಸಂಚಾರಕ್ಕೆ ಮುಕ್ತವಾಗಿದ್ದ ಸೇತುವೆ ಮಳೆಗಾಲದ ಪ್ರಾರಂಭದಲ್ಲಿಯೇ ತನ್ನ ನೈಜಮುಖ ಹೊರಗೆಡವಿದೆ.

ಮಂಗಳೂರಿನ ಹೃದಯಭಾಗದಲ್ಲಿರುವ ಈ ಫ್ಲೈಓವರ್ ಕಾಮಗಾರಿ 10 ವರ್ಷಗಳ ಹಿಂದೆ ಆರಂಭವಾಗಿತ್ತು. 2010ರಿಂದ ಕುಂಟುತ್ತಾ ಸಾಗಿದ್ದ ಕಾಮಗಾರಿ ನಂತರ ಟ್ರೋಲ್‌ಗಳಿಗೆ ಆಹಾರವಾಗಿತ್ತು. ಕರಾವಳಿ ಸಂಸದ ನಳೀನ್ ಕುಮಾರ್ ಕಟೀಲ್ ಅವರನ್ನು ಟ್ರೋಲಿಗರು ಕಾಲೆಳೆಯಲು ಶುರುಮಾಡಿದ್ದೆ ತಡ ಎಚ್ಚೆತ್ತುಕೊಂಡ ಸಂಸದ ಕೊನೆಗೂ ಹೇಗೋ ಕಾಮಗಾರಿಯನ್ನು ಮಾಡಿಮುಗಿಸುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಕಾಮಗಾರಿ ನಡೆದ ಸೇತುವೆಯ ಅಕ್ಕಪಕ್ಕದ ಸರ್ವಿಸ್ ರಸ್ತೆಗಳು ಶುಕ್ರವಾರ ಸುರಿದ ಬಾರೀ ಮಳೆಗೆ ಮುಳುಗಡೆಯಾಗಿದೆ. ಕರಾವಳಿಯಲ್ಲಿ ಮಳೆಗಾಲ ಆರಂಭದಲ್ಲೇ ರಸ್ತೆ ಮುಳುಗಡೆಯಾಗಿದ್ದು, ಮಳೆಗಾಲದ ಮುಂದಿನ ದಿನಗಳಲ್ಲಿ ಇಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಮೇಲ್ಸೇತುವೆ ಕಾಮಗಾರಿಯ ಸಂದರ್ಭದಲ್ಲಿ ಸರ್ವಿಸ್ ರಸ್ತೆಯ ಅಕ್ಕಪಕ್ಕ ಚರಂಡಿ ವ್ಯವಸ್ಥೆ ಮಾಡದಿರೋದು ಅಲ್ಲದೆ ಸೇತುವೆಯನ್ನು ಅವೈಜ್ಞಾನಿಕವಾಗಿ ಕಟ್ಟಿರುವ ಪರಿಣಾಮ ಸೇತುವೆಯ ಅಡರ್‌ಪಾಸ್ ತಗ್ಗುಪ್ರದೇಶವಾಗಿ ಬದಲಾಗಿದೆ. ಈ ಕಾರಣದಿಂದ ಇಲ್ಲಿ ನೀರು ಶೇಕರಣೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ. ಈ ವಿಶ್ವವಿಖ್ಯಾತ ಸೇತುವೆ ಮತ್ತೆ ಟ್ರೋಲ್‌ಗಳಿಗೆ ಆಹಾರವಾಗುವ ಮೊದಲು ಸ್ಥಳೀಯ ಆಡಳಿತ ಸಮಸ್ಯೆ ಬಗೆಹರಿಸಬೇಕು ಎಂಬುದು ಸ್ಥಳೀಯರ ಆಶಯ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!