fbpx

Please assign a menu to the primary menu location under menu

ಬ್ರೇಕ್ ಫೈಲ್ ಆದ ಲಾರಿಯನ್ನು 3ಕಿಮೀ ರಿವರ್ಸ್‌ನಲ್ಲಿ ಚಲಾಯಿಸಿದ ಚಾಲಕ, ಮುಂದೇನಾಯಿತು ನೋಡಿ! ವೈರಲ್ ವಿಡಿಯೋ

ಚಾಲಕನೊಬ್ಬ ಲಾರಿಯನ್ನು ಹಿಮ್ಮುಖವಾಗಿ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಹನ ಬ್ರೇಕ್ ಫೈಲ್ ಆದ ಕಾರಣ ಚಾಲಕ ಲಾರಿಯನ್ನು ಸುಮಾರು ಮೂರು ಕಿಲೋಮೀಟರ್‌ಗಳಷ್ಟು ದೂರ ಹಿಮ್ಮುಖವಾಗಿಯೇ ಚಲಾಯಿಸಿದ್ದಾನೆ.

ಘಟನೆ ನಡೆದಿರೋದು ಮಹಾರಾಷ್ಟ್ರದ ಜಲ್ನಾ-ಸಿಲ್ಲೋಡ್‌ ರಸ್ತೆಯಲ್ಲಿ. ಚಾಲಕ ಲಾರಿಯನ್ನು ಹಿಮ್ಮುಖವಾಗಿ ಚಲಾಯಿಸಲು ಸುತ್ತಲೂ ಇದ್ದ ಬೈಕರ್‌ಗಳ ಸಮೂಹವೊಂದು ಸಹಾಯ ಮಾಡಿರೋದು ವಿಡಿಯೋದಲ್ಲಿ ಸೆರೆಯಾಗಿದೆ.

ಮೂರು ಕಿಲೋಮೀಟರ್‌ನಷ್ಟು ದೂರ ಹಿಮ್ಮುಖವಾಗಿ ಚಾಲನೆ ಮಾಡಿದ ಲಾರಿ ಚಾಲಕ, ಕೊನೆಗೆ ರಸ್ತೆ ಪಕ್ಕದಲ್ಲಿದ್ದ ಹೊಲವೊಂದಕ್ಕೆ ವಾಹನವನ್ನು ತಿರುಗಿಸಿ ಲಾರಿ ನಿಲ್ಲಿಸಲು ಸಫಲನಾಗಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ.

Watch Video

video
error: Content is protected !!