fbpx

Please assign a menu to the primary menu location under menu

ತಂಪು ಪಾನೀಯದ ಮುಚ್ಚಳ ತೆಗೆಯಲು ಈ ಎರಡು ಜೇನುನೊಣಗಳು ಮಾಡಿದ್ದೇನು ನೋಡಿ, ವೈರಲ್ ವಿಡಿಯೋ

ಪ್ರಕೃತಿಯು ಆಶ್ಚರ್ಯಗಳಿಂದ ಕೂಡಿದೆ. ತಂಪು ಪಾನೀಯದ ಮುಚ್ಚಳ ತೆರೆಯಲು ಎರಡು ಜೇನುನೊಣಗಳು ಕಷ್ಟಪಡುತ್ತಿರುವ ಇತ್ತೀಚಿನ ವೀಡಿಯೊ ಇದಕ್ಕೆ ಒಂದು ಉದಾಹರಣೆಯಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಅಂತರ್ಜಾಲದಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲಾದ ವೈರಲ್ ಕ್ಲಿಪ್‌ನಲ್ಲಿ ಎರಡು ಸಣ್ಣ ಜೇನುನೊಣಗಳು ತಮ್ಮ ಗಾತ್ರಕ್ಕಿಂತ ದೊಡ್ಡದಾದ ಕ್ಯಾಪ್ ತಿರುಗಿಸಲು ಹೆಣಗಾಡುತ್ತಿರುವುದು ಸೆರೆಯಾಗಿದೆ. ಅಲ್ಲೇ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿ ಜೇನು ನೊಣಗಳ ಸಾಹಸವನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ.

ಈ ವಿಡಿಯೋವನ್ನು ಅವರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ನೆಟಿಜನ್‌ಗಳನ್ನು ಬೆರಗುಗೊಳಿಸಿದೆ. ಈ ವಿಡಿಯೋವನ್ನು ಕಳೆದ ವಾರ ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಸೆರೆಹಿಡಿಯಲಾಗಿದೆ‌ ಎಂದು ತಿಳಿದುಬಂದಿದ್ದು, ಸಖತ್ ವೈರಲ್ ಆಗಿದೆ.

ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಲ್ಲದೆ, ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಹತ್ವವನ್ನು ಈ ವಿಡಿಯೋ ಎತ್ತಿ ತೋರಿಸುತ್ತೇ ಎಂದು ಕಮೆಂಟ್ ಮಾಡಿದ್ದಾರೆ.

Watch Video

video
error: Content is protected !!