fbpx

Please assign a menu to the primary menu location under menu

ಕ್ಷುಲ್ಲಕ ಕಾರಣಕ್ಕೆ 17 ವರ್ಷದ ದಲಿತ ಯುವಕನನ್ನು ಥಳಿಸಿ ಹತ್ಯೆಗೈದ ಮುಸ್ಲಿಂ ಮತಾಂಧರ ಗುಂಪು (ವಿಡಿಯೋ)

ಕರೋನಾ ಸಂಕಷ್ಟದ ಮಧ್ಯೆಯೂ ದೇಶದಾದ್ಯಂತ ಮತಾಂಧರ ಅಟ್ಟಹಾಸ ಮುಂದುವರೆದಿದೆ. ಮುನ್ನೆಯಷ್ಟೇ ಶಿವಮೊಗ್ಗದ ಭದ್ರಾವತಿಯಲ್ಲಿ ಮಾಸ್ಕ್ ಧರಿಸಲು ಹೇಳಿದ ದಲಿತ ಹಿಂದೂ ಯುವಕನನ್ನು ಮುಸ್ಲಿಂ ಯುವಕರ ಗುಂಪು ಥಳಿಸಿ, ಚೂರಿಯಿಂದ ಇರಿದು ಹತ್ಯೆಗೈದಿತ್ತು. ಇಷ್ಟೇ ಅಲ್ಲದೆ ಮಂಗಳೂರಿನಲ್ಲಿಯೂ ಮಾಸ್ಕ್ ಧರಿಸಲು ಹೇಳಿದ ಪಿಡಿಓ ಮೇಲೆ ಮುಸ್ಲಿಂ ಯುವಕರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿತ್ತು.

ಇದೀಗ ದೆಹಲಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ದಲಿತ ಹಿಂದೂ ಯುವಕನನ್ನು ಮುಸ್ಲಿಂ ಮತಾಂಧರ ಗುಂಪು ಥಳಿಸಿ ಹತ್ಯೆಗೈದಿದೆ. ದೆಹಲಿಯ ಕಲ್ಯಾಣ್‌ಪುರಿ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು 17ವರ್ಷದ ಗೋಪಾಲ್ ದಾರುಣವಾಗಿ ಸಾವನ್ನಪ್ಪಿದ್ದಾನೆ‌.

ಮೃತ ಗೋಪಾಲ್‌ನ ಪರಿಚಯಸ್ತ ಮುಸ್ಲಿಂ ಯುವಕರೇ ಮೇ27ರಂದು ಹಾಡುಹಗಲೇ ಆತನ ಮೇಲೆ ದಾಳಿ ಮಾಡಿ ಥಳಿಸಿ ಹತ್ಯೆಗೈದಿದ್ದಾರೆ. ಹಂತಕರನ್ನು ಮೊಹಮ್ಮದ್ ಅಲೀಮ್, ಫಿರೋಜ್ ಖಾನ್, ಯೂಸುಫ್ ಖಾನ್ ಎಂದು ಗುರುತಿಸಲಾಗಿದ್ದು, ದೆಹಲಿ ಪೊಲೀಸರು ಹಂತಕರ ಬಂಧನಕ್ಕೆ ಬಲೆಬೀಸಿದ್ದಾರೆ.

ಮೃತ ಗೋಪಾಲ್‌ನ ಪೋಷಕರು ಹಾಗೂ ಸ್ಥಳೀಯ ಹಿಂದೂ ಸಂಘಟನೆಗಳು ಆರೋಪಿ ಮುಸ್ಲಿಂ ಮತಾಂದರನ್ನು ಬಂಧಿಸಿ ಮರಣದಂಡನೆ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ. ಹಂತಕರು ಸ್ಥಳೀಯ ಮಸೀದಿಯೊಂದರಲ್ಲಿ ಅಡಗಿದ್ದಾರೆ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಆ ಮಸೀದಿಯ ಮುಂದೆ ಮೃತ ಯುವಕನ ಪೋಟೋ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

Watch Video

video
error: Content is protected !!