fbpx

ನೋಡನೋಡುತ್ತಿದ್ದಂತೆ ಕುಸಿಯಿತು ಕಟ್ಟಡ, ಸ್ವಲ್ಪದರಲ್ಲೆ ಪಾರಾದ ಬಾಲಕ! ಶಾಕಿಂಗ್ ವಿಡಿಯೋ ನೋಡಿ

ಗಾಳಿ ಮಳೆಯ ಅಬ್ಬರಕ್ಕೆ ಸಾಕಷ್ಟು ಮರಗಳು, ಕಟ್ಟಡಗಳು ಕುಸಿಯುವುದನ್ನು ನಾವು ನೋಡಿರುತ್ತೇವೆ. ಇಂತಹ ಅನಾಹುತಗಳ ಸಂದರ್ಭ ಅವಶೇಷಗಳ ಅಡಿ ಸಿಲುಕಿ ಸಾಕಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಕೆಲವೇ ಕೆಲವು ಜನ ಅದೃಷ್ಟವಂತರು ತಮ್ಮ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಇದೀಗ ಇಂತಹದ್ದೇ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕನೋರ್ವ ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಗಾಳಿಯ ರಭಸಕ್ಕೆ ಪಕ್ಕದ ಮನೆಯೊಂದರ ಗೋಡೆ ಕುಸಿದು ಪಾದಾಚಾರಿ ಮಾರ್ಗದ ಮೇಲೆ ಬಿದ್ದಿದೆ. ಬಾಲಕನ ಅದೃಷ್ಟ ಚೆನ್ನಾಗಿತ್ತು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಘಟನೆ ನಡೆದಿರೋದು ಇಂಗ್ಲೆಂಡ್‌ನಲ್ಲಿ, 17 ವರ್ಷ ವಯಸ್ಸಿನ ರಾಯನ್ ಪುಟ್ಟಿಕ್ ಎಂಬಾತನೇ ಅದೃಷ್ಟವಂತ ಬಾಲಕ. ಪರೀಕ್ಷೆ ಬರೆಯೋದಕ್ಕೆಂದು ಕಾಲೇಜಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸಾವಿನ ದವಡೆಯಿಂದ ಕೂದಳೆಲೆ ಅಂತರದಿಂದ ಪಾರಾಗಿದ್ದಾನ.

ಇಷ್ಟೆಲ್ಲ ಅವಘಡ ಕಣ್ಣ ಮುಂದೆ ನಡೆದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಬಾಲಕ, ಕಟ್ಟಡದ ಅವಶೇಷಗಳನ್ನು ದಾಟಿ ನೇರವಾಗಿ ಕಾಲೇಜಿಗೆ ಹೋಗಿ ಪರೀಕ್ಷೆ ಬರೆದಿದ್ದಾನೆ.

ಈ ಸಂಪೂರ್ಣ ಘಟನೆಯ ವಿಡಿಯೋ ಎದುರು ಮನೆಯ ಡೋರ್‌ಬೆಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದ್ದು, ಕಟ್ಟಡದ ಪಕ್ಕ ನಿಲ್ಲಿಸಲಾಗಿದ್ದ ಕೆಲ ವಾಹನಗಳು ಜಖಂ ಆಗಿದೆ.

Watch Video

video

error: Content is protected !!