fbpx

Please assign a menu to the primary menu location under menu

ಮಾಸ್ಕ್ ಹಾಕಿ ಓಡಾಡಿ ಎಂದ ದಲಿತ ಯುವಕನನ್ನು ಥಳಿಸಿ, ಚೂರಿಯಿಂದ ಇರಿದು ಕೊಂದ ಮುಸ್ಲಿಮರ ಗುಂಪು! ಭದ್ರಾವತಿಯ ಜೈಭೀಮ್ ನಗರದಲ್ಲಿ ನಡೆದ ಘಟನೆ

ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನನ್ನು ಮುಸ್ಲಿಂ ಮತಾಂಧರ ಗುಂಪೊಂದು ಹತ್ಯೆಗೈದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿ ಹಳೆ ನಗರದ ಜೈ ಭೀಮ್ ನಗರದಲ್ಲಿ ಘಟನೆ ಸಂಭವಿಸಿದ್ದು, ಘಟನೆ ಸಂಬಂಧ ಪೊಲೀಸರು ಐವರು ಯುವಕರನ್ನು ಬಂಧಿಸಿದ್ದಾರೆ.

ಏನಿದು ಘಟನೆ? ಕೃತ್ಯಕ್ಕೆ ಕಾರಣವೇನು?

ಶ್ರೀಕಂಠ ಮತ್ತು ಸುನಿಲ್ ಎಂಬುವವರು ಜೈ ಭೀಮ್ ನಗರದ ತಮ್ಮ ನಿವಾಸದ ಬಳಿ ಮಾತನಾಡುತ್ತ ನಿಂತಿದ್ದ ವೇಳೆ ನಿಶಾದ್ ಪಾಷಾ ಮತ್ತು ಮಹಮ್ಮದ್ ಜುನೇದ್ ಎಂಬ ಯುವಕರು ಗುಟ್ಕಾ ತರಲು ಅಲ್ಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅಲ್ಲಿ ನಿಂತು ಮಾತನಾಡುತ್ತಿದ್ದ ಶ್ರೀಕಂಠ ಮತ್ತು ಸುನೀಲ್ ಆ ಇಬ್ಬರು ಯುವಕರನ್ನು ಕರೆದು ‘ಕರ್ಫ್ಯೂ ವೇಳೆ ಹೊರಗಡೆ ಓಡಾಡಬೇಡಿ, ಪೊಲೀಸರು ಬರುತ್ತಾರೆ’ ಎಂದು ಹೇಳಿದ್ದಾರೆ.

ಇದರಿಂದ ಅಲ್ಲಿ ಎರಡೂ ಗುಂಪಿನ ನಡುವೆ ಮಾತಿನ ಚಕಮಕಿಯಾಗಿದ್ದು, ಆಕ್ರೋಶಗೊಂಡ ನಿಶಾದ್ ಪಾಷಾ ಫೋನ್ ಮಾಡಿ ತನ್ನ ಗೆಳೆಯರಾದ ಸಾಬಿತ್ ಮತ್ತು ಇದಾಯತ್ ಅವರನ್ನು ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ.

ನಿಶಾದ್ ಪಾಷಾ ಫೋನ್ ಮಾಡಿದ ತಕ್ಷಣ ನಾಲ್ವರು ಮುಸ್ಲಿಂ ಮತಾಂಧರು ದ್ವಿಚಕ್ರ ವಾಹನದ ಮೂಲಕ ಜೈ ಭೀಮ್ ನಗರಕ್ಕೆ ಬಂದಿದ್ದಾರೆ. ತಾವು ತಂದಿದ್ದ ದ್ವಿಚಕ್ರ ವಾಹನವನ್ನು ರಸ್ತೆಪಕ್ಕ ನಿಂತಿದ್ದ ಸುನಿಲ್‍ಗೆ ಗುದ್ದಿಸಿ ಕೆಳಗೆ ಬೀಳಿಸಿದ್ದಾರೆ. ಅಲ್ಲದೆ ಸುನಿಲ್ ಬೆನ್ನಿಗೆ ಚಾಕುವಿನಿಂದ ಚುಚ್ಚಿದ್ದಾರೆ. ಇದನ್ನು ಬಿಡಿಸಲು ಹೋದ ಶ್ರೀಕಂಠನ ಮೇಲೂ ದಾಳಿ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಸುನಿಲ್ ಮತ್ತು ಶ್ರೀಕಂಠನನ್ನು ಸ್ಥಳೀಯರ ನೆರವಿನಿಂದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಶ್ರೀಕಂಠನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌.

ಘಟನೆ ಸಂಬಂಧ ಭದ್ರಾವತಿ ಪೊಲೀಸರು ಐವರನ್ನು ಬಂಧಿಸಿದ್ದು, ಬಂದಿತರನ್ನು ಸಾಬೀತ್ (20), ಇದಾಯತ್ (20), ನಿಶಾದ್ ಪಾಷಾ (21), ನಗರದ ಮಹಮದ್ ಜುನೇದ್ (20), ತಬ್ರೇಜ್ ಪಾಷಾ (21) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಬಳಸಲಾಗಿದ್ದ ಎರಡು ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದ್ದು, ಘಟನೆ ಕುರಿತು ಹಳೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!