fbpx

ಆಟವಾಡುತ್ತಾ ಹೋಗಿ ಸಂಪ್‌ನೊಳಕ್ಕೆ ಬಿದ್ದ ಮಗು! ಶಾಕಿಂಗ್ ವಿಡಿಯೋ ನೋಡಿ

ಮಗುವೊಂದು ಆಟವಾಡುತ್ತಾ ತೆರೆದಿಟ್ಟ ಸಂಪ್‌ನೊಳಕ್ಕೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫೇಸ್ – 2 ರಲ್ಲಿ ಘಟನೆ ನಡೆದಿದ್ದು, ಇದೀಗ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದೆ.

ಟ್ಯಾಂಕರ್ಗೆ ನೀರು ತುಂಬಿಸಲೆಂದು ಸಂಪ್‌ನ ಮುಚ್ಚಳ ತೆಗೆಯಲಾಗಿತ್ತು. ಇದೇ ಸಂದರ್ಭದಲ್ಲಿ ಮಗುವೊಂದು ಆಟವಾಡುತ್ತಾ ಸಂಪ್‌ನೊಳಕ್ಕೆ ಬಿದ್ದಿದೆ.

ತಕ್ಷಣ ಮಗುವಿನ ಹತ್ತವರು ಸಂಪ್‌ಗೆ ಬಿದ್ದಿದ್ದ ಮಗುವನ್ನು ಮೇಲಕ್ಕೆತ್ತಿದ್ದಾರೆ. ಸೋಮವಾರದಂದು ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಸಿಸಿಟಿವಿಯಲ್ಲಿ ದಾಖಲಾದ ಘಟನೆಯ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!