fbpx

ತಂದೆ-ತಾಯಿ ಶಾಪಿಂಗ್‌ನಲ್ಲಿ ಬ್ಯುಸಿ! ಉಸಿರುಗಟ್ಟಿ ಕಾರಿನಲ್ಲಿದ್ದ ಮಗುವಿನ ನರಳಾಟ, ಶಾಕಿಂಗ್ ವಿಡಿಯೋ ನೋಡಿ

ತಂದೆ-ತಾಯಿಯ ನಿರ್ಲಕ್ಷ್ಯಕ್ಕೆ ಪುಟ್ಟ ಮಗುವೊಂದು ಉಸಿರಾಡಲಾಗದೆ ನರಳಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜಾಲಹಳ್ಳಿಯ ನ್ಯೂ ಬಿಇಎಲ್‌ನಲ್ಲಿ ಈ ಘಟನೆ ನಡೆದಿದ್ದು, ಶಾಪಿಂಗ್ ತೆರಳುವಾಗ ತಂದೆ-ತಾಯಿ ಮಗುವನ್ನು ಕಾರ್‌ನಲ್ಲಿ ಲಾಕ್ ಮಾಡಿ ಹೋಗಿದ್ದೇ ಘಟನೆಗೆ ಕಾರಣ.

ಯುಗಾದಿ ಹಬ್ಬದ ಪ್ರಯುಕ್ತ ಶಾಪಿಂಗ್‌ಗೆ ಹೋಗಿದ್ದ ದಂಪತಿ, ತಮ್ಮ ನಾಲ್ಕು ವರ್ಷದ ಮಗುವನ್ನು ಕಾರ್‌ನಲ್ಲಿ ಕೂರಿಸಿ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕಾರಿನಲ್ಲಿದ್ದ ಮಗು ಉಸಿರಾಡಲಾಗದೆ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿತ್ತು.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದವರಿಗೆ ಮಗು ಉಸಿರಾಡಲು ಸಾಧ್ಯವಾಗದೆ ಚೀರಾಡೋದು ಕಂಡಿದೆ. ತಕ್ಷಣ ಕಾರಿನ ಕಿಟಕಿ ಗಾಜು ಒಡೆದು ಹಾಕಿ ಮಗುವನ್ನು ರಕ್ಷಿಸಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

ಸ್ಥಳೀಯರ ಸಮಯ ಪ್ರಜ್ಞೆಯಿಂದ ಪುಟ್ಟ ಮಗುವಿನ ಜೀವ ಉಳಿದಿದೆ. ಮಗುವನ್ನು ರಕ್ಷಿಸಿದ ಸ್ಥಳಿಯರು ದಂಪತಿಗೆ ಬುದ್ಧಿವಾದ ಹೇಳಿ ಕಳುಹಿಸಿದರು. ವಿಡಿಯೋ ನೋಡಿ,

error: Content is protected !!