fbpx

Please assign a menu to the primary menu location under menu

ಹಾವಿನ ಜೊತೆ ಸರಸವಾಡಲು ಹೋಗಿ ಸತ್ತೇ ಹೋದ! ಶಾಕಿಂಗ್ ವಿಡಿಯೋ ನೋಡಿ

ಹಾವು ಹಿಡಿಯಲು ಹೋದ ಯುವಕ ದುರಂತವಾಗಿ ಸಾವನ್ನಪ್ಪಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೃತ ವ್ಯಕ್ತಿಯನ್ನು ಮೈಸೂರು ನಗರದ ವಿದ್ಯಾರಣ್ಯಪುರಂ ನಿವಾಸಿ ಮಧು (24) ಎಂದು ಗುರುತಿಸಲಾಗಿದೆ.

ಕೆಲಸದ ನಿಮಿತ್ತ ಮಹದೇಶ್ವರ ಬೆಟ್ಟಕ್ಕೆ ಸ್ನೇಹಿತರೊಂದಿಗೆ ಮಧು ಹೋಗಿದ್ದ, ಅಲ್ಲಿ ಮೆಟ್ಟಿಲ ಮೇಲೆ ಸಂಚರಿಸುತ್ತಿದ್ದ ಹಾವನ್ನು ಹೆಬ್ಬಾವು ಎಂದು ತಿಳಿದು ಅದರ ಬಾಲದ ಮೂಲಕ ಹಿಡಿದು ವಿಡಿಯೋಗೆ ಪೋಸ್ ಕೊಟ್ಟಿದ್ದಾನೆ.

ಆದರೆ ಆ ಹಾವು ತಕ್ಷಣ ಆತನ ಕೈಗೆ ಕಚ್ಚಿದೆ‌. ಆತ ಅಂದುಕೊಂಡಂತೆ ಅದು ಹೆಬ್ಬಾವು ಆಗಿರದೆ ವಿಷಕಾರಿ ಕೊಳಕುಮಂಡಲ ಆಗಿತ್ತು. ಹಾವನ್ನು ಹಿಡಿಯಲು ಬರದೇ ಹೋದರು ಗೆಳೆಯರ ಮುಂದೆ ಪೋಸ್ ಕೊಡಲು ಹೋಗಿ ಅದರಿಂದಲೇ ಕಚ್ಚಿಸಿಕೊಂಡಿದ್ದಾನೆ.

ತಕ್ಷಣ ಮಧುವನ್ನು ಆಸ್ಪತ್ರೆಗೆ ದಾಖಲಿಸಿದರೂ ವಿಷ ಅದಾಗಲೇ ದೇಹವನ್ನು ಆವರಿಸಿದ್ದರಿಂದ ಈತ ಬದುಕಲಿಲ್ಲ. ಇನ್ನು ಈತನಿಗೆ ಹಾವು ಕಚ್ಚುವ ವಿಡಿಯೋ ವೈರಲ್ ಆಗಿದೆ.

Watch Video

error: Content is protected !!