fbpx

Please assign a menu to the primary menu location under menu

ನಡು ರಸ್ತೆಯಲ್ಲಿ ಮಹಿಳೆಗೆ ಚೂರಿಯಿಂದ ಇರಿದು ಕೊಂದ! ನೋಡುತ್ತಾ ನಿಂತ ಜನ, ಶಾಕಿಂಗ್ ವಿಡಿಯೋ

ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನಂಪ್ರತಿ ಹೆಚ್ಚಾಗುತ್ತಲೇ ಇದೆ. ಇದೀಗ ದೆಹಲಿಯಿಂದ ಬೆಚ್ಚಿಬೀಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ದೆಹಲಿಯ ಬುದ್ ವಿಹಾರ್‌ನಲ್ಲಿ ಹಾಡು ಹಗಲೇ ಮಹಿಳೆಯೊಬ್ಬರನ್ನು ಮಾರಣಾಂತಿಕವಾಗಿ ಹತ್ಯೆ ಮಾಡಲಾಗಿದೆ. ಮಹಿಳೆಯನ್ನು ಆಕೆಯ ಪತಿಯೇ ಮನಸೋ ಇಚ್ಚೆ ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ.

ಈ ಭೀಕರ ಹತ್ಯೆಯ ವಿಡಿಯೋ ಹತ್ತಿರದ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜನ ನಿಬಿಡ ಪ್ರದೇಶದಲ್ಲೇ ಈ ದಾಳಿ ನಡೆದಿದ್ದರು ಮಹಿಳೆಯ ರಕ್ಷಣೆಗೆ ಯಾರೊಬ್ಬರು ದಾವಿಸಿಲ್ಲ. ಕೆಲವರು ತಮ್ಮ ಮೊಬೈಲ್ ಕ್ಯಾಮರಾ ಮೂಲಕ ಈ ಹತ್ಯೆಯ ವಿಡಿಯೋ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ವ್ಯಕ್ತಿ ತನ್ನ ಪತ್ನಿಯನ್ನು ನಡು ರಸ್ತೆಯಲ್ಲಿಯೇ ತಡೆದು, ನೆಲಕ್ಕೆ ಬೀಳಿಸಿ 25ಕ್ಕೂ ಹೆಚ್ಚು ಬಾರಿ ಚಾಕೂವಿನಿಂದ ಇರಿದಿದ್ದಾನೆ. ತನ್ನ ಪತ್ನಿ ತನ್ನ ಇಚ್ಚೆಗೆ ವಿರುದ್ಧವಾಗಿ ಕೆಲಸಕ್ಕೆ ಹೋಗುತ್ತಿದ್ದುದೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.

ಮಹಿಳೆ ರಕ್ತಸ್ತ್ರಾವದಿಂದಾಗಿ ಸ್ಥಳದಲ್ಲಿಯೇ ಅಸುನೀಗಿದ್ದಾಳೆ. ಘಟನೆಯ ಸಂಬಂಧ ದೆಹಲಿ ಪೋಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Watch Video

error: Content is protected !!