fbpx

Please assign a menu to the primary menu location under menu

ಕೊರಗಜ್ಜ ಕೋಲದ ಮೇಲೆ ಕಲ್ಲೆಸೆದ ಮುಸ್ಲಿಂ ಯುವಕನ ಪರಿಸ್ಥಿತಿ ಹೇಗಾಗಿದೆ ಗೊತ್ತೇ? ವೈರಲ್ ವಿಡಿಯೋ ನೋಡಿ

ಕರಾವಳಿಯ ಜನರ ಭಕ್ತಿಯ ಪ್ರತೀಕವಾದ ಕೊರಗಜ್ಜ ದೈವದ ಗುಡಿಗಳ ಮೇಲೆ ಕೆಲ ಮತಾಂಧ ಶಕ್ತಿಗಳು ಅಪಚಾರ ಎಸಗುತ್ತಿರೋದು ಸತತವಾಗಿ ನಡೆಯುತ್ತಲಿವೆ. ಕೆಲ ದಿನಗಳ ಹಿಂದಷ್ಟೇ ಕೊರಗಜ್ಜ ಗುಡಿಯ ಮೇಲೆ ಅಪಚಾರ ಎಸಗಿದ ಓರ್ವ ಮುಸ್ಲಿಂ ಯುವಕ ರಕ್ತಕಾರಿ ಸತ್ತು ಹೋಗಿದ್ದು, ಮತ್ತಿಬ್ಬರು ಕೊರಗಜ್ಜನ ಗುಡಿಗೆ ಬಂದು ತಪ್ಪು ಕಾಣಿಕೆ ಹಾಕಿದ್ದರು.

ಇದೀಗ ಮತ್ತೆ ಕೊರಗಜ್ಜ ಕೋಲ ನಡೆಯುತ್ತಿದ್ದ ಜಾಗದಲ್ಲಿ ಕೋಮು ಗಲಭೆ ಎಬ್ಬಿಸಲು ಯತ್ನಿಸಿರೋ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕುಟ್ಟು ಜಂಕ್ಷನ್‌ನಲ್ಲಿರುವ ಕೊರಗಜ್ಜ ಗುಡಿಯಲ್ಲಿ ಸ್ವಾಮಿ ಕೊರಗಜ್ಜ ಕೋಲ ನಡೆಯುತ್ತಿದ್ದ ಸಂದರ್ಭದಲ್ಲಿ ಮುಸ್ಲಿಂ ಯುವಕ ಕಲ್ಲು ತೂರಾಟ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಕೊರಗಜ್ಜನ ಕೋಲ ನಡೆಯುತ್ತಿದ್ದ ವೇಳೆ ಜನರ ಗುಂಪಿನೆಡೆ ಮುಸ್ಲಿಂ ಯುವಕ ಕಲ್ಲು ತೂರಿದ ಹಿನ್ನಲೆ, ಸ್ಥಳೀಯರು ಆತನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಯನ್ನು ಉಳ್ಳಾಲ ನಿವಾಸಿ ಮುಹಮ್ಮದ್ ಹಫೀಜ್ ಎಂದು ಗುರುತಿಸಲಾಗಿದೆ.

ತೊಕ್ಕೊಟ್ಟು ‘ಸ್ವಾಮಿ ಕೊರಗಜ್ಜ ಸೇವಾ ಸಮಿತಿ’ಯ ವತಿಯಿಂದ ವಾರ್ಷಿಕ ಕೋಲವನ್ನು ಆಯೋಜಿಸಲಾಗಿತ್ತು. ಕೋಲದ ಬಳಿಕ ಅಗೆಲು ಪ್ರಸಾದವನ್ನು ವಿತರಿಸುತ್ತಿದ್ದಾಗ, ಮಹಮ್ಮದ್ ಹಫೀಜ್ ಹತ್ತಿರದ ಛಾವಣಿಯ ಮೇಲಿಂದ ಕೆಳಗೆ ನಿಂತಿದ್ದ ಜನರ ಗುಂಪಿನ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದ್ದಾನೆ.

ಇದೇ ಸಂದರ್ಭದಲ್ಲಿ ಅಲ್ಲೇ ಇದ್ದ ಉಳ್ಳಾಲ ಪೊಲೀಸ್‌ ಠಾಣೆಯ ವಾಹನದ ಮೇಲೂ ಒಂದು ಕಲ್ಲು ಬಿದ್ದಿದೆ. ಕೂಡಲೇ ಜನರ ಗುಂಪೊಂದು ಆ ವ್ಯಕ್ತಿ ಇದ್ದ ಸ್ಥಳಕ್ಕೆ ಹೋಗಿ ಆತನನ್ನು ಕೆಳ ಕರೆತಂದು ಥಳಿಸಿ, ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದರು. ಬಂಧನದ ಸಂದರ್ಭದಲ್ಲಿ ಆರೋಪಿ ಡ್ರಗ್ ನಶೆಯಲ್ಲಿ ಇದ್ದ ಎಂದು ಸ್ಥಳೀಯರು ಹೇಳಿದ್ದಾರೆ.

Watch Video

error: Content is protected !!