fbpx

Please assign a menu to the primary menu location under menu

ಮನುಷ್ಯನನ್ನೇ ಹೋಲುವ ಕುರಿ ಮರಿಯ ಜನನ! ಶಾಕಿಂಗ್ ವಿಡಿಯೋ ನೋಡಿ

ಗುಜರಾತ್‌ನ ಸೋನ್‌ಗಡ ತಾಲೂಕಿನ ಸೆಲ್ಟಿಪಡ ಗ್ರಾಮದಲ್ಲಿ ಮಾನವ ಮುಖ ಹೊಂದಿರುವ ಮೇಕೆಯೊಂದು ಜನಿಸಿದೆ. ಮನುಷ್ಯ ರೂಪ‌ ಹೊಂದಿರುವ ಈ ಮೇಕೆ ಹುಟ್ಟಿದ ಸುದ್ದಿ ತಿಳಿಯುತ್ತಿದ್ದಂತೆ ದೇವರ ಅವತಾರ ಎಂದು ಗ್ರಾಮಸ್ಥರು ಪೂಜಿಸಿದ್ದಾರೆ.

ನೋಡಲು ವಿಲಕ್ಷಣವಾಗಿ ಕಾಣುತ್ತಿದ್ದ ಮರಿಯು, ಮೇಕೆಯಂತೆಯೇ ನಾಲ್ಕು ಕಾಲುಗಳನ್ನು ಹೊಂದಿತ್ತು‌. ಆದಾಗ್ಯೂ, ಅದರ ದೇಹದ ಉಳಿದ ಭಾಗಗಳು ಮನುಷ್ಯನ ದೇಹವನ್ನು ಹೋಲುತ್ತಿತ್ತು.

ಮೇಕೆ ಅಜಯ್‌ ಭಾಯಿ ವಾಸವ ಎಂಬ ರೈತನ ಮನೆಯಲ್ಲಿ ಹುಟ್ಟಿರೋದು ಎಂದು ತಿಳಿದುಬಂದಿದೆ. ಮರಿ ಮೇಕೆಯ ಚಿತ್ರಗಳನ್ನು ನೋಡಿದರೆ ಅದರ ಹಣೆ, ಕಣ್ಣು, ಬಾಯಿ ಮತ್ತು ಗಡ್ಡದ ಭಾಗಗಳು ಮನುಷ್ಯರನ್ನೇ ಹೋಲುತ್ತಿತ್ತು, ಅಲ್ಲದೆ ಮೇಕೆಗೆ ಬಾಲವೂ ಇರಲಿಲ್ಲ.

ಈ ಮೇಕೆ ಮರಿಯೂ ಹುಟ್ಟಿದ ಹತ್ತು ನಿಮಿಷಗಳವರೆಗಷ್ಟೇ ಜೀವಂತವಾಗಿತ್ತು ಎಂದು ತಿಳಿದು ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೇಕೆ ಮರಿಯ ಪಕ್ಕದಲ್ಲಿ ಆರತಿ ತಟ್ಟೆ ಇಟ್ಟಿರೋದನ್ನ ಕಾಣಬಹುದಾಗಿದೆ.

ಸ್ಥಳೀಯರ ಪ್ರಕಾರ, ಈ ಮೇಕೆಯ ರೂಪದಲ್ಲಿ ಪೂರ್ವಜರು ಪುನರ್ಜನ್ಮವೆತ್ತಿದ್ದಾರೆ, ಈ ಕಾರಣಕ್ಕಾಗಿಯೆ ಮೇಕೆ ಮರಿಗೆ ಪೂಜೆ ನೆರವೇರಿಸಿರೋದು ಎಂದು ಹೇಳಿದ್ದಾರೆ. ಮೃತ ಮೇಕೆ ಮರಿಯನ್ನು ನಂತರ ಶಾಸ್ತ್ರೋತ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

Watch Video

error: Content is protected !!