fbpx

Please assign a menu to the primary menu location under menu

ಸೈಕಲ್ ಸವಾರನಿಗೆ ಗುದ್ದಿ ಬೀಳಿಸಿದ್ದೂ ಅಲ್ದೆ, ಅವನ ಮೇಲೆಯೇ ಸೈಕಲ್ ಎತ್ತಿಹಾಕಿ ದರ್ಪ ತೋರಿದ! ಶಾಕಿಂಗ್ ವಿಡಿಯೋ ನೋಡಿ

ನಡು ರಸ್ತೆಯಲ್ಲಿಯೇ ಬೈಕ್ ಸವಾರನೊಬ್ಬ ಅಮಾಯಕ ಸೈಕಲ್ ಸವಾರನ‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆಯಲ್ಲಿ ಬದಿಯಲ್ಲಿ ಸಂಚರಿಸುತ್ತಿದ್ದ ಸೈಕಲ್ ಸವಾರನನ್ನು ಬೈಕ್ ಸವಾರ ಗುದ್ದಿ ಕೆಳಗೆ ಬೀಳಿಸಿದ್ದೂ ಅಲ್ಲದೆ ಆತನ ಮೇಲೆಯೇ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾನೆ. ಬೈಕ್ ಗುದ್ದಿದ ಪರಿಣಾಮ ಕೆಳಕ್ಕೆ ಬಿದ್ದ ಸೈಕಲ್ ಸವಾರ ನಡುರಸ್ತೆಯಲ್ಲಿ ಬಿದ್ದು ಏಳಲಾಗದೆ ಸಂಕಷ್ಟ ಪಡುತ್ತಿದ್ದರೆ, ಬೈಕ್ ಸವಾರ ಆತನಿಗೆ ಸಹಾಯ ಮಾಡೋದು ಬಿಟ್ಟು ಆತನ ಮೇಲೆಯೇ ಸೈಕಲ್ ಎತ್ತಿಹಾಕಿದ್ದಾನೆ.

ಸೈಕಲ್ ಸವಾರನ ಮೇಲೆ ಬೈಕ್ ಸವಾರ ಮನಸೋ‌ ಇಚ್ಚೆ ಥಳಿಸುತ್ತಿದ್ದರೆ ಅಲ್ಲಿ ನಿಂತಿದ್ದವರು ಆತನ ಸಹಾಯಕ್ಕೆ ಬರೋದು ಬಿಟ್ಟು ಹಲ್ಲೆನಡೆಸೋದನ್ನೆ ನೋಡುತ್ತಾ ನಿಂತಿದ್ದಾರೆ. ಘಟನೆಯ ವಿಡಿಯೋ ಪಕ್ಕದ ಅಂಗಡಿಯಲ್ಲಿ ಹಾಕಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ‌.

Watch Video

error: Content is protected !!