fbpx

ನದಿಯಲ್ಲಿ ಈಜುತ್ತಿದ್ದವನ ಮೇಲೆ ಏಕಾಏಕಿ ದಾಳಿ ಮಾಡಿದ ಮೊಸಳೆಗಳು! ಮುಂದೇನಾಯಿತು?, ಈ ವೈರಲ್ ವಿಡಿಯೋ ನೋಡಿ

ಮೊಸಳೆಗಳು ಬೇಟೆಯಾಡೋದರಲ್ಲಿ ಚಾಣಾಕ್ಷ ಜೀವಿಗಳು, ವರ್ಷಂಪ್ರತಿ ಪ್ರಪಂಚದಾದ್ಯಂತ ನೂರಾರು ಜನ ಮೊಸಳೆಗಳ ದಾಳಿಗೆ ಪ್ರಾಣ ಕಳೆದುಕೊಳ್ಳುತ್ತಾರೆ. ನೀರಿನಲ್ಲಂತೂ ಕ್ಷಣ ಮಾತ್ರದಲ್ಲಿ ತನ್ನ ಬೇಟೆಯನ್ನು ಹಿಡಿದು ಕಣ್ಮರೆಯಾಗುವ ತಾಕತ್ತು ಮೊಸಳೆಗಳಿಗಿದೆ.

ಇದೀಗ ಇದೇ ಮೊಸಳೆಯ ದಾಳಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊಸಳೆಯೊಂದು ನದಿಯಲ್ಲಿ ಈಜಾಡುತ್ತಿದ್ದ ವ್ಯಕ್ತಿಯನ್ನು ಬೇಟೆಯಾಡಲು ಯತ್ನಿಸಿರುವ ವಿಡಿಯೋ ಇದಾಗಿದೆ.

ನದಿಯಲ್ಲಿ ಈಜಾಡುತ್ತಿದ್ದ ವ್ಯಕ್ತಿಯ ಮೇಲೆ ಏಕಕಾಲಕ್ಕೆ ಮೊಸಳೆಗಳು ದಾಳಿ ಮಾಡಿವೆ. ವ್ಯಕ್ತಿ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಮೊಸಳೆಗಳು ಆತನನ್ನು ಸುತ್ತುವರೆದಿತ್ತು. ಆ ವ್ಯಕ್ತಿ ಬಹಳ ಜಾಗರೂಕತೆಯಿಂದ ಅಲ್ಲೇ ಇದ್ದ ಬೋಟ್ ಅನ್ನು ಏರಲು ಯತ್ನಿಸಿದ್ದಾನೆ.

ಅದೇ ಸಮಯದಲ್ಲಿ ಮೊಸಳೆಯೊಂದು ಆತನ ಬುಜದ ಮೇಲೆ ದಾಳಿ ಮಾಡಲು ಯತ್ನಿಸಿದೆ. ಈ ಸಂದರ್ಭದಲ್ಲಿ ವ್ಯಕ್ತಿಯು ಜೋರಾಗಿ ಕಿರುಚಿದ ಪರಿಣಾಮ ಮೊಸಳೆ ಹೆದರಿ ದೂರ ಹೋಗಿದೆ. ಒಂದು ವೇಳೆ ಆ ವ್ಯಕ್ತಿ ಮೊಸಳೆಯ ಬಾಯಿಗೆ ಸಿಕ್ಕಿದ್ದರೆ ಆತನನ್ನು ಕಾಪಾಡಲು ಯಾರಿಂದಲು ಸಾಧ್ಯವಿರಲಿಲ್ಲ. ವೈರಲ್ ಆಗಿರುವ ವಿಡಿಯೋ ಇಲ್ಲಿದೆ ನೋಡಿ

Watch Video

error: Content is protected !!