fbpx

Please assign a menu to the primary menu location under menu

ಮಗುವಿನ ಸುತ್ತ ರಕ್ಷಣೆಗೆ ನಿಂತ ನಾಲ್ಕು ಕಾಳಿಂಗ ಸರ್ಪಗಳು! ಶಾಕಿಂಗ್ ವಿಡಿಯೋ ನೋಡಿ

ಆರಾಮವಾಗಿ ಮಲಗಿರುವ ಮಗುವಿನ ಸುತ್ತ ನಾಲ್ಕು ಕಾಳಿಂಗ ಸರ್ಪಗಳು ಕಾವಲು ಕಾಯುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣ ಯೂಟ್ಯೂಬ್‌ನಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಬೃಹತ್ ಗಾತ್ರದ ನಾಲ್ಕು ಕಾಳಿಂಗ ಸರ್ಪಗಳು ಮಲಗಿರುವ ಮಗುವಿನ ಮೇಲೆ ಕಾವಲು ನಿಂತಿರುವುದನ್ನು ಕಾಣಬಹುದು.

ತನ್ನ ಸುತ್ತ ಹಾವುಗಳು ಹರಿದಾಡುತ್ತಿದ್ದರೂ ಮಗು ಆರಾಮವಾಗಿ ಮಲಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಈ ಘಟನೆ ನಡೆದಿರುವ ನಿಖರವಾದ ಸ್ಥಳ ಮತ್ತು ಗುರುತನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾವಾಡಿಗರು ಸರೀಸೃಪಗಳನ್ನು ತಮ್ಮ ಸಾಕುಪ್ರಾಣಿಗಳಾಗಿ ಇಟ್ಟುಕೊಂಡು ವಿವಿಧ ತಂತ್ರಗಳನ್ನು ಮಾಡುವ ಮೂಲಕ ಜೀವನ ಸಾಗಿಸುತ್ತಾರೆ. ಇವರು ತಾವು ಸಾಕುವ ನಾಗರ ಹಾವುಗಳ ವಿಷದ ಹಲ್ಲುಗಳನ್ನು ಕತ್ತರಿಸಿ ತೆಗೆಯೋದರಿಂದ ಅದು ಕಚ್ಚಿದರೂ ಜೀವಕ್ಕೆ ಅಪಾಯ ಉಂಟಾಗುವುದಿಲ್ಲ.

ನಾಗರ ಹಾವುಗಳು ಹಾಗೂ ಕಾಳಿಂಗ ಸರ್ಪಗಳು ತಮ್ಮ ಕೋರೆಹಲ್ಲುಗಳಲ್ಲಿ ಸಾಕಷ್ಟು ವಿಷವನ್ನು ಹೊಂದಿದ್ದು, ಈ ವಿಷದಿಂದ ಏಕಕಾಲಕ್ಕೆ ಇಪ್ಪತ್ತು ಜನರನ್ನು ಕೊಲ್ಲಬಹುದಾಗಿದೆ. ವೈರಲ್ ವಿಡಿಯೋ ನೋಡಿ,

Watch Video

error: Content is protected !!