fbpx

ತನ್ನ ಪ್ರಾಣ ಪಣಕ್ಕಿಟ್ಟು ಹದ್ದಿನೊಂದಿಗೆ ಕಾದಾಡಿ ಮರಿಗಳನ್ನು ರಕ್ಷಿಸಿದ ತಾಯಿ ಕೋಳಿ! ಸಖತ್ ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ

ತಾಯಿ-ಮಕ್ಕಳ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಮಕ್ಕಳು ಸಂಕಷ್ಟಕ್ಕೆ ಸಿಲುಕಿದಾಗ ತಾಯಿ ತನ್ನ ಸರ್ವಸ್ವವನ್ನೂ ಪಣಕ್ಕಿಟ್ಟು ಕಾಪಾಡುತ್ತಾಳೆ. ಇಲ್ಲಿ ಕೋಳಿಯೊಂದು ತನ್ನ ಮರಿಗಳನ್ನು ಹೊತ್ತೊಯ್ಯಲು ಬಂದ ಹದ್ದಿನ ಜೊತೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕಾದಾಡಿದೆ.

ಕೋಳಿಯು ತನ್ನ ಪುಟ್ಟ ಮರಿಗಳೊಂದಿಗೆ ಸಾಗುತ್ತಿರುವಾಗ ಆಹಾರ ಅರಸಿ ಬಂದ ಹದ್ದೊಂದು ಕೋಳಿ ಮರಿಗಳ ಮೇಲೆ ದಾಳಿ ಮಾಡಲು ಹೊಂಚು ಹಾಕಿದೆ. ಇನ್ನೇನು ಕೋಳಿ ಮರಿಗಳ ಮೇಲೆ ದಾಳಿ ಮಾಡಿ ಹೊತ್ತೊಯ್ಯಬೇಕು ಎನ್ನುವಷ್ಟರಲ್ಲಿ ತಾಯಿಕೋಳಿ ತನ್ನ ಮರಿಗಳನ್ನು ಕಾಪಾಡಲು ಹದ್ದಿನ ಮೇಲೆ ದಾಳಿ ಮಾಡಿದೆ.

ಹದ್ದನ್ನು ಅಟ್ಟಾಡಿಸಿ ಓಡಿಸಿದ ಕೋಳಿ, ತನ್ನ ಕೊಕ್ಕಿನಿಂದ ಅದನ್ನು ತಿವಿದು ತಿವಿದು ಕೊಂದು ಹಾಕಿದೆ. ತಾಯಿ ಕೋಳಿಯ ಆಕ್ರೋಶದ ಮುಂದೆ ಹದ್ದು ಅಸಹಾಯಕವಾಗಿ ಪ್ರಾಣ ಬಿಟ್ಟಿದೆ.

ಸದ್ಯ ಕೋಳಿಯು ಹದ್ದಿನ ಜೊತೆ ಕಾದಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತನ್ನ ಮರಿಗಳನ್ನು ಕಾಪಾಡಲು ಹದ್ದಿನ ಜೊತೆ ಹೋರಾಡಿದ ತಾಯಿ ಕೋಳಿ ಪಟ್ಟ ಶ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!