ಕೆಲವೊಮ್ಮೆ ಸಣ್ಣ ಪ್ರಾಣಿಗಳೂ ತಮ್ಮ ಬುದ್ದಿ ಉಪಯೋಗಿಸಿ ದೊಡ್ಡ ಸಂಕಷ್ಟದಿಂದಲೂ ಪಾರಾಗುತ್ತವೆ. ಇದಕ್ಕೆ ತಾಜಾ ಉದಾಹರಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ.
ಬೆಕ್ಕೊಂದು ಸಣ್ಣ ಹಕ್ಕಿಯನ್ನು ಬೇಟೆಯಾಡಿ ತನ್ನ ಹಿಡಿತದಲ್ಲಿ ಹಿಡಿದುಕೊಂಡಿತ್ತು. ಇನ್ನೇನು ಹಕ್ಕಿ ಬೆಕ್ಕಿನ ಹೊಟ್ಟೆ ಸೇರುವುದರಲ್ಲಿತ್ತು, ಅಷ್ಟರಲ್ಲೆ ಆ ಪುಟ್ಟ ಹಕ್ಕಿ ತನ್ನ ಚಾಣಾಕ್ಷತನವನ್ನು ಬೆಕ್ಕಿನ ಮೇಲೆ ಪ್ರಯೋಗಿಸಿದೆ.
ಬೆಕ್ಕಿನ ಹಿಡಿತದಲ್ಲಿದ್ದ ಹಕ್ಕಿ ಸತ್ತಂತೆ ನಟಿಸಿದ್ದು, ಇದನ್ನು ಗಮನಿಸಿದ ಬೆಕ್ಕು ಹಕ್ಕಿ ಸತ್ತಿತೆಂದು ಅದನ್ನು ತನ್ನ ಹಿಡಿತದಿಂದ ಬಿಟ್ಟಿದೆ. ಇದೇ ಸಮಯಕ್ಕೆ ಕಾಯುತ್ತಿದ್ದ ಹಕ್ಕಿ ಕ್ಷಣಾರ್ಧದಲ್ಲೇ ಹಾರಿಹೋಗಿದೆ.
ಇನ್ನೇನು ಬೆಕ್ಕಿಗೆ ಆಹಾರವಾಗುವುದರಲ್ಲಿದ್ದ ಹಕ್ಕಿ ತನ್ನ ಬುದ್ದಿವಂತಿಕೆಯಿಂದ ಪ್ರಾಣ ರಕ್ಷಿಸಿಕೊಂಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ಅನೇಕರು ಹಕ್ಕಿಯ ಬುದ್ದಿವಂತಿಕೆಗೆ ಸಲಾಮ್ ಹೇಳಿದ್ದಾರೆ. ವೈರಲ್ ವಿಡಿಯೋ ನೋಡಿ,
Watch Video
April fool😊 pic.twitter.com/2lbUAkhzP1
— Susanta Nanda IFS (@susantananda3) April 1, 2021