fbpx

Please assign a menu to the primary menu location under menu

ಕಾಲುವೆಗೆ ಬಿದ್ದಿದ್ದ ಆನೆ ಮರಿಯನ್ನು ಹೆಗಲ ಮೇಲೆ ಹೊತ್ತು ತಾಯಿ ಮಡಿಲಿಗೆ ಸೇರಿಸಿದ ಮಹಾತ್ಮ! ವೈರಲ್ ವಿಡಿಯೋ ನೋಡಿ

ನಿಜ ಜೀವನದ ಬಾಹುಬಲಿಯನ್ನು ನೋಡಿದ್ದೀರ? ಇವರ ಹೆಸರು ಪಳನಿಚಮಿ ಶರತ್ ಕುಮಾರ್. ತಮಿಳುನಾಡಿನ ಮೆಟ್ಟುಪಾಳಯಂ ಕಾಡಿನಲ್ಲಿ ಕಾಲುವೆಗೆ ಬಿದ್ದಿದ್ದ ಆನೆಮರಿಯೊಂದನ್ನ ರಕ್ಷಿಸಿ ಅದನ್ನು ತಾಯಿಯ ಮಡಿಲಿಗೆ ಸೇರಿಸಿದ ಮಹಾತ್ಮ.

ಘಟನೆ ನಡೆದಿರೋದು 2017 ರ ಡಿಸೆಂಬರ್‌ನಲ್ಲಿ, ತಮಿಳುನಾಡಿನ ಅರಣ್ಯ ಸಿಬ್ಬಂದಿಯೊಬ್ಬರು ಕಾಲುವೆಗೆ ಬಿದ್ದಿದ್ದ ಆನೆ ಕರುವನ್ನು ಮೇಲಕ್ಕೆತ್ತಿ, ನಂತರ ಅದನ್ನು ತನ್ನ ಹೆಗಲ ಮೇಲೆ ಹೊತ್ತು ಅದನ್ನು ತಾಯಿಯೊಂದಿಗೆ ಮತ್ತೆ ಒಂದಾಗುವ ಹಾಗೆ ಮಾಡಿದ್ದರು.

ಈ ಕಾರ್ಯಾಚರಣೆಯ ಹಲವಾರು ಚಿತ್ರಗಳು ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ನೆಟಿಜನ್‌ಗಳು ಪ್ರಾಣಿಗಳ ರಕ್ಷಣೆಗೆ ಅವರ ಬದ್ಧತೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದ್ದರು.

ಇದೀಗ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ‘ಸುಸಂತಾ ನಂದಾ’ ಅವರು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು 8,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಆನೆಗಳು ಜನನದ ಸಮಯದಲ್ಲಿಯೇ ಸುಮಾರು 90-100 ಕಿ.ಗ್ರಾಂ ತೂಗುತ್ತದೆ. ಅಷ್ಟು ಭಾರದ ಆನೆ ಮರಿಯನ್ನು ಭುಜದ ಮೇಲೆ ಹೊತ್ತುಕೊಂಡ ಅಧಿಕಾರಿಗೆ ನಮಸ್ಕಾರ ಎಂದು ಅನೇಕರು ಶ್ಲಾಘಿಸಿದ್ದಾರೆ. ವೈರಲ್ ವಿಡಿಯೋ ನೋಡಿ,

Watch Video

error: Content is protected !!