fbpx

ಹೆಬ್ಬಾವನ್ನೇ ನುಂಗಿ ಹಾಕಿದ ಭಾರಿ ಗಾತ್ರದ ಕಾಳಿಂಗ ಸರ್ಪ! ಶಾಕಿಂಗ್ ವಿಡಿಯೋ ನೋಡಿ

ಹೆಬ್ಬಾವುಗಳು ಬಾರಿ ಗಾತ್ರದ ಪ್ರಾಣಿಗಳನ್ನು ನುಂಗೋದನ್ನ ನಾವು ಹೆಚ್ಚಾಗಿ ನೋಡಿರುತ್ತೇವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು, ಕಾಳಿಂಗ ಸರ್ಪವೊಂದು ಹೆಬ್ಬಾವನ್ನೇ ನುಂಗಿ ಹಾಕಿದೆ.

ಘಟನೆ ನಡೆದಿರೋದು ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲೂಕಿನ, ಸೋಮಂತಡ್ಕದಲ್ಲಿ. ಮನೆಯೊಂದರ ಹಿತ್ತಲಿನಲ್ಲಿದ್ದ ಹೆಬ್ಬಾವನ್ನು ಬೃಹತ್ ಕಾಳಿಂಗ ನುಂಗಿದ್ದು, ನಂತರ ಹರಿದಾಡಲು ಸಾಧ್ಯವಾಗದೆ ಹೆಬ್ಬಾವನ್ನು ಹೊಟ್ಟೆಯಿಂದ ಹೊರಕ್ಕೆ ಹಾಕಿದೆ.

ಸುಮಾರು 14 ಅಡಿ ಉದ್ದವಿದ್ದ ಕಾಳಿಂಗ ಸರ್ಪವು ಬಾರಿಗಾತ್ರದ ಹೆಬ್ಬಾವನ್ನು ನುಂಗಿತ್ತು. ನಂತರ ಹರಿದಾಡಲೂ ಆಗದೆ, ಜೀರ್ಣಿಸಿ ಕೊಳ್ಳಲೂ ಆಗದೆ ಕಾಳಿಂಗ ಸರ್ಪ ಎರಡು ದಿನದಿಂದ ಇದ್ದಲ್ಲೇ ಇತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:  ಮನುಷ್ಯನನ್ನೇ ಹೋಲುವ ಕುರಿ ಮರಿಯ ಜನನ! ಶಾಕಿಂಗ್ ವಿಡಿಯೋ ನೋಡಿ

ಈ ಬಗ್ಗೆ ಸ್ಥಳೀಯರು ಉರಗತಜ್ಞ ಬೆಳ್ತಂಗಡಿಯ ಸ್ನೇಕ್ ಅಶೋಕ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸ್ನೇಕ್ ಅಶೋಕ್ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಕಾಳಿಂಗ ಸರ್ಪ ತನ್ನ ಹೊಟ್ಟೆಯೊಳಗಿದ್ದ ಹೆಬ್ಬಾವನ್ನು ಹೊರ ಹಾಕಿತಾದರೂ, ಹೆಬ್ಬಾವು ಅಷ್ಟರಲ್ಲಾಗಲೆ ಮೃತಪಟ್ಟಿತ್ತು. ರಕ್ಷಣೆ ಮಾಡಿದ ಕಾಳಿಂಗ ಸರ್ಪವನ್ನು ಮತ್ತೆ ಕಾಡಿಗೆ ಬಿಟ್ಟಿದ್ದಾರೆ. ವೈರಲ್ ವಿಡಿಯೋ ನೋಡಿ,

Watch Video

error: Content is protected !!