fbpx

Please assign a menu to the primary menu location under menu

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಾಳಿಯಲ್ಲಿ ಹಾರಿದ ಬೈಕ್ ಸವಾರ! ಭೀಕರ ಅಪಘಾತದ ವಿಡಿಯೋ ನೋಡಿ

ದೇಶದಲ್ಲಿ ವರ್ಷಂಪ್ರತಿ ಲಕ್ಷಾಂತರ ಜನ ಭೀಕರ ರಸ್ತೆ ಅಪಘಾತಗಳಿಂದಾಗಿ ಅಸುನೀಗುತ್ತಾರೆ. ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸದೆ ಇರೋದು, ವಾಹನಗಳಲ್ಲಿನ ತಾಂತ್ರಿಕ ದೋಷಗಳು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ.

ಇಂತಹ ಅಪಘಾತಗಳ ಸಾಕಷ್ಟು ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಇದೀಗ ಇಂತಹದ್ದೆ ಭೀಕರ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಾರಿ ವೇಗದಿಂದ ಬಂದ ಬೈಕ್ ಒಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಗಾಳಿಯಲ್ಲಿ ಎಸೆಯಲ್ಪಟ್ಟು ರಸ್ತೆ ಪಕ್ಕ ನಿಲ್ಲಿಸಿದ್ದ ಸಣ್ಣ ಟ್ರಕ್‌ಗೆ ಬಡಿದು ಫೂಟ್‌ಪಾತ್ ಮೇಲೆ ಬಿದ್ದಿದ್ದಾನೆ.

ಇದು ಭಾರತದಲ್ಲಿ ನಡೆದಿರೋದು ಎಂದು ಅನೇಕರು ವಿಡಿಯೋವನ್ನು ಶೇರ್ ಮಾಡುತ್ತಿದ್ದು, ಆದರೆ ವಿಡಿಯೋವನ್ನು ಪರಿಶೀಲಿಸಿದಾಗ ಇದು ಮೇಲ್ನೋಟಕ್ಕೆ ಭಾರತದ್ದಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ವಿಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!