fbpx

ನೋಡನೋಡುತ್ತಿದ್ದಂತೆ ವ್ಯಕ್ತಿಯ ಮೇಲೆರಗಿ ದಾಳಿ ಮಾಡಿದ ಚಿರತೆ! ಶಾಕಿಂಗ್ ವಿಡಿಯೋ ನೋಡಿ

ಜಮ್ಮುವಿನ ಐಷಾರಾಮಿ ಗಾಂಧಿನಗರ ಪ್ರದೇಶದ ಗ್ರೀನ್ ಬೆಲ್ಟ್ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬನ ಮೇಲೆ ಚಿರತೆಯೊಂದು ದಾಳಿ ಮಾಡಿದೆ. ಈ ಚಿರತೆ ದಾಳಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಂಗಳವಾರದಂದು ಈ ಘಟನೆ ನಡೆದಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದ ವನ್ಯಜೀವಿ ಇಲಾಖೆ ಅಧಿಕಾರಿಗಳು ಚಿರತೆಯನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆ ದಾಳಿಯಿಂದ ವ್ಯಕ್ತಿಯ ಮುಖಕ್ಕೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ:  ಮಾಲಿಕನನ್ನು ಹಿಂಬದಿ ಕೂರಿಸಿ ಸಖತ್ ಆಗಿ ಬೈಕ್ ಚಲಾಯಿಸಿದ ಶ್ವಾನ! ವೈರಲ್ ವಿಡಿಯೋ ನೋಡಿ

ಚಿರತೆ ದಾಳಿ ನಡೆಸಿದ ಗಾಂಧಿನಗರ ಪ್ರದೇಶದ ಗ್ರೀನ್ ಬೆಲ್ಟ್ ಪಾರ್ಕ್‌ಗೆ ವನ್ಯಜೀವಿ ಸಂರಕ್ಷಣಾ ವಿಭಾಗದ ತಂಡಗಳು ಧಾವಿಸಿದ್ದು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!