fbpx

ಮಾಲಿಕನನ್ನು ಹಿಂಬದಿ ಕೂರಿಸಿ ಸಖತ್ ಆಗಿ ಬೈಕ್ ಚಲಾಯಿಸಿದ ಶ್ವಾನ! ವೈರಲ್ ವಿಡಿಯೋ ನೋಡಿ

ಒಮ್ಮೊಮ್ಮೆ ಶ್ವಾನಗಳು ತೋರುವ ಜಾಣತನ, ಬುದ್ಧಿವಂತಿಕೆ ಅಚ್ಚರಿಯ ಜೊತೆಗೆ ನಿಜಕ್ಕೂ ಮನಸ್ಸಿಗೂ ಆಪ್ತವಾಗುತ್ತವೆ. ಸದ್ಯ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ.

ಶ್ವಾನವೊಂದು ತನ್ನ ಮಾಲಿಕನನ್ನು ಹಿಂಬದಿ ಕೂರಿಸಿ ಸಖತ್ ಆಗಿ ಬೈಕ್ ಚಲಾಯಿಸುತ್ತಿರುವ ವಿಡಿಯೋ ಇದಾಗಿದೆ‌. ವಾಹನಗಳು ಓಡಾಡುತ್ತಿರುವ ರಸ್ತೆಯಲ್ಲಿಯೇ ಶ್ವಾನ ತನ್ನ ಬೈಕ್ ಚಲಾಯಿಸುವ ಕೌಶಲ್ಯವನ್ನು ತೋರಿಸಿದೆ.

ಇದನ್ನೂ ಓದಿ:  ಮಾಸ್ಕ್ ಹಾಕಿಲ್ಲ ಎಂದು ವ್ಯಕ್ತಿಯನ್ನು ನಡುರಸ್ತೆಯಲ್ಲಿ ಕೆಡವಿ ತುಳಿದು ಥಳಿಸಿದ ಪೋಲೀಸರು! ಶಾಕಿಂಗ್ ವೀಡಿಯೋ ನೋಡಿ

ವಿಡಿಯೋ ನೋಡಿದ ಹಲವರು ಶ್ವಾನದ ಬೈಕ್ ರೈಡಿಂಗ್ ಸ್ಕಿಲ್ ನೋಡಿ ಅಚ್ಚರಿಗೆ ಒಳಗಾಗಿದ್ದಾರೆ. ಇನ್ನು ಕೆಲವರು ಮಾಲಿಕನ ವಿರುದ್ದ ಕಿಡಿಕಾರಿದ್ದು, ಇಂತಹ ಅಪಾಯಕಾರಿ ಸ್ಟಂಟ್ ಅನ್ನು ವಾಹನಗಳು ಸಂಚರಿಸುವ ರಸ್ತೆಯಲ್ಲಿ ಮಾಡೋದರಿಂದ ತಾವು ತೊಂದರೆಗೆ ಒಳಗಾಗುವುದಲ್ಲದೆ ಸಾರ್ವಜನಿಕರ ಪ್ರಾಣಕ್ಕೂ ಸಂಚಕಾರ ಉಂಟು ಮಾಡುತ್ತಾರೆ ಎಂದಿದ್ದಾರೆ.

Watch Video

error: Content is protected !!