fbpx

ನೋಡನೋಡುತ್ತಿದ್ದಂತೆ ವ್ಯಕ್ತಿಯನ್ನು ಗುಂಡಿಟ್ಟು ಕೊಂದೇ ಬಿಟ್ಟ! ಲೈವ್ ಮರ್ಡರ್ ವಿಡಿಯೋ ವೈರಲ್

ಆಸ್ತಿ ಕಲಹಕ್ಕೆ ಸಂಬಂಧಪಟ್ಟಂತೆ ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯ ತುರ್ಕೌಲಿಯಾ ಪೊಲೀಸ್ ಠಾಣಾ ಪ್ರದೇಶದ ಮಂಜಾರ್ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ.

ಆಸ್ತಿಗೆ ಸಂಬಂಧಪಟ್ಟಂತೆ ಅಕ್ಕಪಕ್ಕದ ಮನೆಯ ಜನರು ಜಗಳವಾಡುತ್ತಿದ್ದರು. ಈ ಸಂದರ್ಭದಲ್ಲಿ ಜಗಳ ತಾರಕಕ್ಕೇರಿದ್ದು, ಇನ್ನಷ್ಟು ಜನರು ಸ್ಥಳದಲ್ಲಿ ಬಂದು ಸೇರಿದ್ದಾರೆ. ಈ ಸಂದರ್ಭದಲ್ಲಿ ವಿವೇಕ್ ಕುಮಾರ್ ಎಂಬಾತ ತನ್ನಲ್ಲಿದ್ದ ರಿವಾಲ್ವರ್ ತೆಗೆದು ತನ್ನ ಪಕ್ಕದ ಮನೆಯವನ ಮೇಲೆ ಗುಂಡು ಹಾರಿಸಿದ್ದಾನೆ.

ಗುಂಡು ತಗುಲಿದ ತಕ್ಷಣ ವ್ಯಕ್ತಿ ನೆಲಕ್ಕೆ ಬಿದ್ದು ನರಳಾಡುತ್ತಿದ್ದರೆ, ಅಲ್ಲಿದ್ದ ಜನ ಗುಂಡು ಹಾರಿಸಿದ ವ್ಯಕ್ತಿಯನ್ನು ಥಳಿಸಲು ಮುಂದಾಗಿದ್ದಾರೆ. ಗುಂಡು ತಗುಲಿದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಿತಾದರು, ಆತ ಅಷ್ಟರಲ್ಲಾಗಲೆ ಪ್ರಾಣ ಕಳೆದುಕೊಂಡಿದ್ದ.

ಇದನ್ನೂ ಓದಿ:  ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಾಳಿಯಲ್ಲಿ ಹಾರಿದ ಬೈಕ್ ಸವಾರ! ಭೀಕರ ಅಪಘಾತದ ವಿಡಿಯೋ ನೋಡಿ

ಹಗಲು ಹೊತ್ತಿನಲ್ಲೇ ಈ ಘಟನೆ ನಡೆದಿದ್ದು, ಅಲ್ಲಿದ್ದ ಕೆಲವರು ಸಂಪೂರ್ಣ ಘಟನೆಯನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ್ದಾರೆ. ಮೃತ ವ್ಯಕ್ತಿ ಔಷಧಿ ವ್ಯಾಪಾರಿಯಾಗಿದ್ದು, ಪಕ್ಕದ ಮನೆಯವನ ಜೊತೆ ಆಸ್ತಿ ವಿಚಾರವಾಗಿ ಕಲಹ ಹೊಂದಿದ್ದ. ಇದೀಗ ಈ ಆಸ್ತಿ ಕಲಹ ಆತನ ಪ್ರಾಣವನ್ನೇ ಹೊತ್ತೊಯ್ದಿದೆ.

ಗುಂಡು ಹಾರಿಸಿದ್ದ ಆರೋಪಿ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಪೋಲಿಸರು ಆರೋಪಿಯನ್ನು ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!