fbpx

Please assign a menu to the primary menu location under menu

ಮಾಸ್ಕ್ ಹಾಕಿಲ್ಲ ಎಂದು ವ್ಯಕ್ತಿಯನ್ನು ನಡುರಸ್ತೆಯಲ್ಲಿ ಕೆಡವಿ ತುಳಿದು ಥಳಿಸಿದ ಪೋಲೀಸರು! ಶಾಕಿಂಗ್ ವೀಡಿಯೋ ನೋಡಿ

ಮಾಸ್ಕ್ ಹಾಕಿಲ್ಲ ಎಂದು ಬಡ ಆಟೋ ರಿಕ್ಷಾ ಚಾಲಕನ ಮೇಲೆ ಪೋಲಿಸರು ದೌರ್ಜನ್ಯ ಎಸಗಿರೋ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿರೋದು ಎಂದು ತಿಳಿದು ಬಂದಿದೆ.

ದೇಶದಲ್ಲಿ ಕರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸೋದು ಕಡ್ಡಾಯ ಮಾಡಲಾಗಿದೆ. ಆದರೆ ಕೆಲವರು ನಿರ್ಲಕ್ಷ್ಯದಿಂದಾಗಿ ಮಾಸ್ಕ್ ಧರಿಸೋದಿಲ್ಲ, ಹೀಗಾಗಿ ಅಂತವರಿಂದ ದಂಡ ವಸೂಲಿ ಮಾಡಲಾಗುತ್ತಿದೆ.

ಇದೀಗ ಇಂದೋರ್‌ನಲ್ಲಿ ರಿಕ್ಷಾ ಚಾಲಕ ಮಾಸ್ಕ್ ಧರಿಸಿರಲಿಲ್ಲ ಎಂದು ಪೋಲಿಸರು ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರಿಕ್ಷಾ ಚಾಲಕ ಕೃಷ್ಣ(35) ಎಂಬಾತ ಆಸ್ಪತ್ರೆಗೆ ದಾಖಲಾಗಿದ್ದ ತಂದೆಗೆ ತನ್ನ ರಿಕ್ಷಾದಲ್ಲಿ ಊಟ ತೆಗೆದುಕೊಂಡು ಹೋಗೋ ಸಂದರ್ಭದಲ್ಲಿ ಆತ ಧರಿಸಿದ್ದ ಮಾಸ್ಕ್ ಗಾಳಿಯ ರಭಸಕ್ಕೆ ಕೆಳಕ್ಕೆ ಬಿದ್ದಿದೆ.

ಅವಸರದಲ್ಲಿದ್ದ ಚಾಲಕ ಅದರ ಕಡೆ ಗಮನ ಕೊಡದೆ ಆಸ್ಪತ್ರೆಯತ್ತ ರಿಕ್ಷಾ ಚಲಾಯಿಸಿದ್ದಾರೆ. ಇದೇ ಸಮಯದಲ್ಲಿ ಆತನ ರಿಕ್ಷಾವನ್ನು ತಡೆದು ನಿಲ್ಲಿಸಿದ ಪೊಲೀಸರು ಠಾಣೆಗೆ ಬಂದು ದಂಡ ಕಟ್ಟುವಂತೆ ಸೂಚನೆ ನೀಡಿದ್ದಾರೆ.

ಈ ವೇಳೆ ಡ್ರೈವರ್ ತಂದೆಗೆ ಊಟ ಕೊಟ್ಟು ನಂತರ ಬರುವುದಾಗಿ ಹೇಳಿದ್ದಾನೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಚಾಲಕನ ಮೇಲೆಯೆ ಸಿಕ್ಕಸಿಕ್ಕ ಪ್ರಕರಣಗಳಲ್ಲಿ ಕೇಸು ದಾಖಲಿಸಿದ್ದಾರೆ.

ಇದೀಗ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಅಧಿಕಾರಿಗಳಿಬ್ಬರು ಅಮಾನತುಗೊಂಡಿದ್ದಾರೆ. ಆಟೋ ಚಾಲಕ ಜಾಮೀನು ಮೇಲೆ ರಿಲೀಸ್ ಆಗಿದ್ದಾನೆ.

Watch Video

error: Content is protected !!