fbpx

ವೃದ್ದನ ಕಾರು ಕದಿಯಲು ಹೋದ ಕಳ್ಳನ ಪರಿಸ್ಥಿತಿ ಏನಾಗಿದೆ ನೋಡಿ! ವೈರಲ್ ವಿಡಿಯೋ

ನಾವು ಸಾಕಷ್ಟು ವಾಹನ ಕಳ್ಳತನದ ವಿಡಿಯೋಗಳ‌ನ್ನು ನೋಡಿರುತ್ತೇವೆ. ವಾಹನ ಕಳ್ಳರು ಹೆಚ್ಚಾಗಿ ವಯಸ್ಸಾದವರನ್ನೇ ಟಾರ್ಗೆಟ್ ಮಾಡಿ ವಾಹನ ಎಗರಿಸುತ್ತಾರೆ. ತಮ್ಮ ಟಾರ್ಗೆಟ್ ವೃದ್ದರಾದರೆ, ಅವರಿಗೆ ಹೆಚ್ಚು ಪ್ರತಿರೋಧ ತೋರಿಸೋಕೆ ಆಗಲ್ಲ, ತಾವು ಸಲೀಸಾಗಿ ಕಳ್ಳತನ ಮಾಡಬಹುದು ಎಂಬುದು ಕಳ್ಳರ ಅನಿಸಿಕೆ.

ಆದರೆ ಇಲ್ಲಿ ಕಳ್ಳನೊಬ್ಬ ಅದೇ ರೀತಿ ವೃದ್ದರೊಬ್ಬರ ಕಾರು ಕಳ್ಳತನ ಮಾಡಲು ಹೋಗಿ ಹಿಗ್ಗಾಮುಗ್ಗಾ ಜಾಡಿಸಿಕೊಂಡಿದ್ದಾನೆ. ಘಟನೆ ನಡೆದಿರೋದು ಅಟ್ಲಾಂಟಾದಲ್ಲಿ. ಅಟ್ಲಾಂಟಾ ಪೊಲೀಸರು ಸಣ್ಣ ವಿಡಿಯೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ವೈರಲ್ ವಿಡಿಯೋದಲ್ಲಿ ಯುವಕನೊಬ್ಬನ ಜೊತೆ 82 ವರ್ಷದ ವೃದ್ಧ ಫೈಟ್ ಮಾಡುತ್ತಿರೋದನ್ನ ಕಾಣಬಹುದಾಗಿದೆ. 82 ವರ್ಷದ ವೃದ್ಧನೊಬ್ಬ, ಬಂದೂಕುದಾರಿ ಯುವಕನ ಜೊತೆ ಫೈಟ್ ಮಾಡುತ್ತಿರುವ ದೃಶ್ಯವಿದ್ದು, ಈ ಘಟನೆ ಕಳೆದ ಮಾರ್ಚ್ 11ರಂದು ನಡೆದಿದೆ.

ಗ್ಯಾಸ್ ಸ್ಟೇಷನ್ನಲ್ಲಿ ನಿಂತಿದ್ದ ಯುವಕನೊಬ್ಬ ವೃದ್ಧನ ಜೊತೆ ಕೆಲಕಾಲ ಸಂಭಾಷಣೆ ನಡೆಸಿದ್ದಾನೆ, ಇದಾದ ಬಳಿಕ ಗನ್ ಹೊರತೆಗೆದ ಯುವಕ ಕಾರನ್ನು ಕೊಡುವಂತೆ ವೃದ್ಧನಿಗೆ ಬೆದರಿಕೆ ಹಾಕಿದ್ದಾನೆ. ಗನ್ ಪಾಯಿಂಟ್‌ನಲ್ಲಿ ಕಾರುಗಳ್ಳ ಬೆದರಿಕೆ ಹಾಕಿದ್ರು ಬಗ್ಗದ ವೃದ್ಧ, ಯುವಕನ ಜೊತೆ ಸಮಬಲದಿಂದ ಕಾದಾಡಿದ್ದಾನೆ.

ಕೊನೆಗೆ ಕಾರಿನ ಬಳಿ ತೆರಳಿದ ಯುವಕ ಕಾರನ್ನ ಸ್ಟಾರ್ಟ್ ಮಾಡಲು ಯತ್ನಿಸಿದ್ದು, ಕಾರು ಬೇಗನೆ ಸ್ಟಾರ್ಟ್ ಆಗದ ಕಾರಣ ಸ್ಥಳದಿಂದ ಪರಾರಿಯಾಗಿದ್ದಾನೆ. ಕಳ್ಳನ ಜೊತೆ ಕಾದಾಟದಲ್ಲಿ ವೃದ್ದನ ತೋಳಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದಾರೆ.

ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಅಟ್ಲಾಂಟಾ ಪೊಲೀಸರು ಆರೋಪಿ ಪತ್ತೆಗೆ ಸಾರ್ವಜನಿಕರ ನೆರವನ್ನ ಕೇಳಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!