ಹಾವೇರಿ: ರಾಜ್ಯದಲ್ಲಿ ರೌಡಿಗಳ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ರೌಡಿಗಳ ಗ್ಯಾಂಗ್ ಒಂದು ತಮ್ಮ ವಾಹನ ತಡೆದ ಪೋಲಿಸರ ಮೇಲೆಯೇ ಗುಂಡು ಹಾರಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿತ್ತು. ಇದೀಗ ಇಂತಹದ್ದೇ ಒಂದು ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ.
ರಸ್ತೆಬದಿ ಗೂಡಂಗಡಿ ಇಟ್ಟು ಕೊಂಡು ವ್ಯಾಪಾರ ಮಾಡುವ ಬಡ ಅಂಗಡಿ ಮಾಲೀಕನ ಮೇಲೆ ಪುಡಿ ರೌಡಿಯೊಬ್ಬ ತನ್ನ ಪ್ರತಾಪ ಮೆರೆಯಲು ಹೋಗಿದ್ದಾನೆ. ಸಂಜೆಯ ವೇಳೆ ಗೂಡಂಗಡಿಗೆ ಹೋದ ಪುಡಿ ರೌಡಿ ಹೊಟ್ಟೆ ತುಂಬಾ ಎಗ್ರೈಸ್ ತಿಂದಿದ್ದಾನೆ. ಅಂಗಡಿ ಮಾಲೀಕ ಬಿಲ್ ಕೊಡಿ ಅಂತ ಕೇಳಿದ್ರೇ, ಮಚ್ಚು ಹಿಡ್ಕೊಂಡು ಅದೇ ಎಗ್ರೈಸ್ ಅಂಗಡಿ ಮೇಲೆ ರೌಡಿಶೀಟರ್ ದಾಳಿ ಮಾಡ್ಬಿಟ್ಟ.
ತಕ್ಷಣ ಅಲ್ಲಿದ್ದವರು ಪೋಲೀಸರಿಗೆ ವಿಷಯ ಮುಟ್ಟಿಸಿದ್ದು, ಆಗಲೇ ನೋಡಿ ಲೇಡಿ ಪೋಲೀಸ್ ಒಬ್ಬರು ಕಾನ್ಸ್ಟೇಬಲ್ ಜತೆ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾರೆ. ಪುಡಿ ರೌಡಿ ಪೋಲೀಸರ ಮೇಲೆಯೆ ಮಚ್ಚು ಬೀಸಲು ಯತ್ನಿಸಿದ್ದಾನೆ.
ಪೋಲೀಸರ ಸಮಯಪ್ರಜ್ಞೆಯಿಂದ ಆರೋಪಿಯನ್ನು ಬಂದಿಸಿ ಜೈಲಿಗಟ್ಟಲಾಗಿದೆ. ಹಾವೇರಿಯಲ್ಲಿ ನಡೆದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.