fbpx

Please assign a menu to the primary menu location under menu

ಆಂಜನೇಯನ ದರ್ಶನ ಪಡೆದು ದೇವಸ್ಥಾನದ ಆವರಣದಲ್ಲೇ ಪ್ರಾಣ ಬಿಟ್ಟ ಕೋತಿ! ವೈರಲ್ ವಿಡಿಯೋ ನೋಡಿ

ಸಾಂಗ್ಲಿ ಜಿಲ್ಲೆಯ ಮೀರಾಜ್ ತಾಲ್ಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಕಳೆದ ಶನಿವಾರ ಬೆಳಿಗ್ಗೆ ಗುಂಡೇವಾಡಿ ಗ್ರಾಮದಲ್ಲಿರು ಪ್ರಾಚೀನ ಹನುಮಾನ್ ದೇವಸ್ಥಾನಕ್ಕೆ ಆಗಮಿಸಿದ ಕೋತಿಯೊಂದು ಭಜರಂಗಬಲಿಯ ವಿಗ್ರಹಕ್ಕೆ ನಮಸ್ಕರಿಸಿ ಅಲ್ಲೇ ಮೃತಪಟ್ಟಿದೆ.

ಗುಂಡೇವಾಡಿಯಲ್ಲಿರುವ ಪ್ರಾಚೀನ ಹನುಮಾನ್ ದೇವಾಲಯವನ್ನು ಐದು ವರ್ಷಗಳ ಹಿಂದೆ ನವೀಕರಿಸಲಾಗಿದ್ದು, ಹಲವಾರು ಕೋತಿಗಳು ದೇವಾಲಯದ ಪಕ್ಕದಲ್ಲಿರುವ ಮರಗಳ ಮೇಲೆ ಆಶ್ರಯ ಪಡೆದುಕೊಂಡಿವೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ನೀಡುವ ಹಣ್ಣು-ಹಂಪಲುಗಳೇ ಇವುಗಳಿಗೆ ಆಹಾರ.

ಶನಿವಾರದಂದು ಭಕ್ತರು ಭಜರಂಗಬಲಿಯ ವಿಗ್ರಹವನ್ನು ಪೂಜಿಸುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಕೋತಿಯೊಂದು ಮನುಷ್ಯರಂತೆ ತಾನೂ ಹನುಮಾನ್ ವಿಗ್ರಹಕ್ಕೆ ನಮಸ್ಕರಿಸಲು ಶುರು ಮಾಡಿದೆ. ಇದನ್ನು ಗಮನಿಸಿದ ಭಕ್ತರು ಆಶ್ಚರ್ಯಚಕಿತರಾಗಿದ್ದು, ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಈ ವಿಡಿಯೋವನ್ನು ಸೆರೆಹಿಡಿದಿದ್ದಾರೆ.

ಮಾಹಿತಿಯ ಪ್ರಕಾರ ದೇವಾಲಯಕ್ಕೆ ಪ್ರವೇಶಿಸಿದ ನಂತರ ಕೋತಿ ಬಹಳ ಹೊತ್ತು ಅತ್ತಿತ್ತ ಓಡಾಡುತ್ತಾ ವಿಗ್ರಹಕ್ಕೆ ನಮಸ್ಕರಿಸಲು ಶುರುಮಾಡಿದೆ. ಸ್ವಲ್ಪ ಸಮಯದ ನಂತರ ಕೋತಿ ನಡೆಯುವುದನ್ನು ನಿಲ್ಲಿಸಿತು.

ಕೋತಿ ನಡೆಯುವುದನ್ನು ನಿಲ್ಲಿಸಿದ ಕೂಡಲೇ ಗ್ರಾಮಸ್ಥರು ಸೂಕ್ಷ್ಮವಾಗಿ ಗಮನಿಸಿದಾಗ ಕೋತಿ ಅಲ್ಲಿಯೇ ಪ್ರಾಣಬಿಟ್ಟಿತ್ತು. ಘಟನೆಯ ವಿಷಯ ತಿಳಿದು ನೂರಾರು ಗ್ರಾಮಸ್ಥರು ದೇವಾಲಯಕ್ಕೆ ಆಗಮಿಸಿದ್ದು, ನಂತರ ಗ್ರಾಮಸ್ಥರು ದೇವಾಲಯದ ಬಳಿ ಕೋತಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Watch Video

error: Content is protected !!