fbpx

Please assign a menu to the primary menu location under menu

ಮಗುವಿನ ತೊಟ್ಟಿಲ ಕೆಳಗೆ ಪ್ರತ್ಯಕ್ಷವಾಯಿತು ಬೃಹತ್ ಗಾತ್ರದ ಹಾವು, ವೈರಲ್ ವಿಡಿಯೋ ನೋಡಿ

ಮಗು ಹುಟ್ಟುವಾಗ ತಾಯಿ ಎಷ್ಟೊಂದು ನೋವನ್ನು ಅನುಭವಿಸುತ್ತಾಳೆ. ಆದರೆ, ಮಗುವಿನ ನಗು ನೋಡಿದ ತಕ್ಷಣ ತನ್ನ ನೋವನ್ನೇ ಮರೆಯುತ್ತಾಳೆ. ಕೈ ತುತ್ತು ನೀಡಿ, ಅಂಬೆಗಾಲಿಡಿಸಿ ಬದುಕಿನುದ್ದಕ್ಕೂ ಮಗುವಿನ ಏಳಿಗೆಗಾಗಿ ಶ್ರಮಿಸುತ್ತಾಳೆ. ತನ್ನ ಮಗುವಿನ ರಕ್ಷಣೆಗಾಗಿ ತಾಯಿ ಎಂತಹ ತ್ಯಾಗಕ್ಕೂ ಸಿದ್ದವಾಗಿರುತ್ತಾಳೆ.

ತಾಯಿ ತನ್ನ ಪ್ರಾಣ ಪಣಕ್ಕಿಟ್ಟು ತನ್ನ ಮಗುವಿನ ರಕ್ಷಣೆ ಮಾಡಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದೆಯೇ ಇವೆ. ಇದೀಗ ಇಂತಹದ್ದೇ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಯಿಯೊಬ್ಬಳು ತನ್ನ ಪುಟ್ಟ ಮಗುವನ್ನು ತೊಟ್ಟಿಲಲ್ಲಿ ಹಾಕಿ ತೂಗುತ್ತಿರುವ ವಿಡಿಯೋ ಇದಾಗಿದ್ದು, ವಿಡಿಯೋದಲ್ಲಿ ಬೃಹತ್ ಗಾತ್ರದ ಹಾವೊಂದು ಕಿಟಕಿಯ ಮೂಲಕ ತೊಟ್ಟಿಲ ಕೆಳಭಾಗಕ್ಕೆ ಬರುತ್ತಿರೋದನ್ನ ಕಾಣಬಹುದಾಗಿದೆ.

ತೊಟ್ಟಿಲನ್ನು ತೂಗುತ್ತಿದ್ದ ತಾಯಿಗೆ ತೊಟ್ಟಿಲ ಕೆಳಗೆ ಹಾವು ನುಸುಳುತ್ತಿರೋದು ಕಾಣಿಸಿದ್ದು, ತಕ್ಷಣ ತೊಟ್ಟಿಲಲ್ಲಿದ್ದ ಮಗುವನ್ನು ಎತ್ತಿಕೊಂಡು ಪಕ್ಕದ ಕೋಣೆಗೆ ಓಡಿಹೋಗಿದ್ದಾಳೆ. ಒಂದು ವೇಳೆ ತಾಯಿ ಭಯದಿಂದ ಮಗುವನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದರೆ ಮಗುವಿನ ಮೇಲೆ ಹಾವು ದಾಳಿ ಮಾಡುವ ಸಾಧ್ಯತೆಯಿತ್ತು.

ತಾಯಿಯ ಸಮಯಪ್ರಜ್ಞೆಯಿಂದ ಮಗು ಹಾಗೂ ತಾಯಿ ಇಬ್ಬರೂ ಸಂಕಷ್ಟದಿಂದ ಪಾರಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!