fbpx

ಆಸ್ಪತ್ರೆ ಬೆಡ್ ಮೇಲೆ ರೊಮಾನ್ಸ್, ಆಶಾ ಕಾರ್ಯಕರ್ತೆ ಜತೆ ಯುವಕನ ಲವ್ವಿಡವ್ವಿ ವಿಡಿಯೋ ಸಖತ್ ವೈರಲ್

ಸರ್ಕಾರಿ ಆಸ್ಪತ್ರೆಯ ಬೆಡ ಮೇಲೆ ಜೋಡಿಯೊಂದು ಲವ್ವಿಡವ್ವಿಯಲ್ಲಿ ತಲ್ಲೀನವಾಗಿರುವ ವೀಡಿಯೋ ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ನಡೆದಿರೋದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ.

ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿರುವ ಮಹಿಳೆ ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಆಸ್ಪತ್ರೆಯ ಬೆಡ್ ಮೇಲೆಯೇ ರೊಮಾನ್ಸ್ ಮಾಡಿದ್ದಾರೆ.

ಆಸ್ಪತ್ರೆ ಬೆಡ್ ಮೇಲೆಯೇ ಈ ಜೋಡಿ ಹೊರಳಾಡಿದ್ದು, ಪರಸ್ಪರ ಚುಂಬಿಸುತ್ತಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ದೃಶ್ಯದಲ್ಲಿರುವ ವ್ಯಕ್ತಿಯನ್ನು ಗ್ರಾಮ ಪಂಚಾಯತ್ ಸದಸ್ಯ ದೇವಪ್ಪ ಕರಿಯಪ್ಪ ಪೂಜಾರಿ ಎನ್ನಲಾಗಿದೆ.

ಇದನ್ನೂ ಓದಿ:  ಜಸ್ಟ್ ಮಿಸ್! ಸಿಂಹಗಳಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಜೀವ ಉಳಿಸಿಕೊಂಡ ಕಾಡು ಹಂದಿ, ವೈರಲ್ ವಿಡಿಯೋ ನೋಡಿ

ಸಾರ್ವಜನಿಕರ ವೈದ್ಯಕೀಯ ಚಿಕಿತ್ಸೆಗೆ ಇರೋ ಆಸ್ಪತ್ರೆಯ ಬೆಡ್ ಮೇಲೆ ಈ ಜೋಡಿ ಚೆಲ್ಲಾಟ ನಡೆಸಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕ ಆಸ್ತಿಯನ್ನು ದುರುಪಯೋಗಪಡಿಸಿಕೊಂಡ ಜೋಡಿಯ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ.

Watch Video

error: Content is protected !!