fbpx

ಮದುವೆಯಲ್ಲಿ ‘ಎಂಜಲು ಉಗುಳಿ’ ರೋಟಿ ಬೇಯಿಸುವ ವಿಡಿಯೋ ವೈರಲ್! ಆರೋಪಿ ಸುಹೇಲ್ ಬಂಧನ, ವೈರಲ್ ವಿಡಿಯೋ ನೋಡಿ

ಮದುವೆಗೆ ಅಡುಗೆ ತಯಾರಿಸಲು ಬಂದಿದ್ದ ಬಾಣಸಿಗನೊಬ್ಬ ರೊಟ್ಟಿಗಳ ಮೇಲೆ ತನ್ನ ಎಂಜಲು ಸವರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ಸಂಬಂಧ ಉತ್ತರಪ್ರದೇಶ ಪೋಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಬಂಧಿತ ಯುವಕನನ್ನು ‘ಸೋಹೆಲ್’ ಎಂದು ಗುರುತಿಸಲಾಗಿದೆ‌. ಉತ್ತರ ಪ್ರದೇಶದ ಮೀರತ್‌ನಲ್ಲಿ ಆಯೋಜಸಲಾಗಿದ್ದ ಮದುವೆ ಕಾರ್ಯಕ್ರಮದಲ್ಲಿ ಅಡುಗೆ ಮಾಡುತ್ತಿದ್ದ ಸೋಹೆಲ್‌ ಪ್ರತಿ ರೋಟಿಯ ಮೇಲೆ ಉಗುಳಿ ಬೇಯಿಸುತ್ತಿದ್ದ.

ಅಷ್ಟೇ ಅಲ್ಲದೆ ತನ್ನ ಘನಂದಾರಿ ಕೆಲಸವನ್ನು ತನ್ನ ಗೆಳೆಯರಿಂದ ವಿಡಿಯೋ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಸಿದ್ದ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಮೀರತ್‌ನ ಹಿಂದೂ ಜಾಗರಣ ವೇದಿಕೆ ನಾಯಕರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿ, ಆರೋಪಿಯನ್ನ ಬಂಧಿಸುವಂತೆ ಒತ್ತಾಯಿಸಿತ್ತು.

ಇದನ್ನೂ ಓದಿ:  ಕಾಲುವೆಗೆ ಬಿದ್ದಿದ್ದ ಆನೆ ಮರಿಯನ್ನು ಹೆಗಲ ಮೇಲೆ ಹೊತ್ತು ತಾಯಿ ಮಡಿಲಿಗೆ ಸೇರಿಸಿದ ಮಹಾತ್ಮ! ವೈರಲ್ ವಿಡಿಯೋ ನೋಡಿ

ಈ ಸಂಬಂಧ ಮೀರತ್ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಸಚಿನ್ ಸಿರೋಹಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆಯನ್ನು ಕೂಡ ನಡೆಸಿದ್ದರು. ಸದ್ಯ ಆರೋಪಿ ಸೋಹೆಲ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

error: Content is protected !!