fbpx

ಸಾವು ಯಾವೆಲ್ಲ ರೀತಿಯಲ್ಲಿ ಬರುತ್ತೆ ನೋಡಿ! ಕ್ರಿಕೆಟ್ ಮೈದಾನದಲ್ಲೇ ಜವರಾಯನ ಅಟ್ಟಹಾಸದ ವಿಡಿಯೋ ವೈರಲ್

ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಬುಧವಾರದಂದು ಘಟನೆ ನಡೆದಿದ್ದು ಜವರಾಯನ ಅಟ್ಟಹಾಸದ ವಿಡಿಯೋ ವೈರಲ್ ಆಗಿದೆ.

ಪುಣೆಯ ಜುನ್ನಾರ್ ತೆಸಿಲ್‌ನಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಟೂರ್ನಮೆಂಟ್ ಒಂದರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಆಟಗಾರನೊಬ್ಬ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತ ಕ್ರಿಕೆಟಿಗನನ್ನು ಬಾಬು ನಾಲ್ವಡೆ ಎಂದು ಗುರುತಿಸಲಾಗಿದೆ.

ಕ್ರಿಕೆಟ್ ಪಂದ್ಯಾಟದ ವೇಳೆ ಬಾಬು ಇದ್ದಕ್ಕಿದ್ದಂತೆ ಕುಸಿದು ಬೀಳುವ ದೃಶ್ಯಗಳು ವಿಡಿಯೊದಲ್ಲಿ ದಾಖಲಾಗಿದೆ. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಇದನ್ನೂ ಓದಿ:  ಸತ್ತಂತೆ ನಟಿಸಿ ಬೆಕ್ಕಿಗೇ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡ ಹಕ್ಕಿ! ವೈರಲ್ ವಿಡಿಯೋ ನೋಡಿ

ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದ್ದು, ಸಾವು ಯಾವ ಕ್ಷಣದಲ್ಲಿ ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಹೃದಯಾಘಾತದಿಂದಾಗಿ ಬಾಬು ನಾಲ್ವಡೆ ಮೃತಪಟ್ಟಿರೋದಾಗಿ ನಾರಾಯಣ್‌ಗಾವ್ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Watch Video

error: Content is protected !!