fbpx

Please assign a menu to the primary menu location under menu

ಕಾಶ್ಮೀರದಲ್ಲಿ ಇ’ಸ್ಲಾಮಿಕ್ ಭ’ಯೋತ್ಪಾದಕರ ಅಟ್ಟಹಾಸ, ಸಿಸಿಟಿವಿಯಲ್ಲಿ ಸೆರೆಯಾಯಿತು ಭೀಕರ ದೃಶ್ಯ! ವೈರಲ್ ವಿಡಿಯೋ ನೋಡಿ

ಜಮ್ಮು-ಕಾಶ್ಮೀರದಲ್ಲಿ ಇ’ಸ್ಲಾಮಿಕ್ ಭ’ಯೋತ್ಪಾದಕರ ಅಟ್ಟಹಾಸ ಮುಂದುವರೆದಿದೆ. ನಿನ್ನೆಯಷ್ಟೇ ಹಿಂದೂ ಉದ್ಯಮಿಗೆ ಸೇರಿದ ‘ಶ್ರೀ ಕೃಷ್ಣಾ ಹೋಟೇಲ್’ ಮೇಲೆ ಉ’ಗ್ರರು ನಡೆಸಿದ ದಾಳಿಯಲ್ಲಿ ಉದ್ಯಮಿಯ ಪುತ್ರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇಂದು ಮತ್ತೆ ಕಾಶ್ಮೀರದ ಶ್ರೀನಗರದಲ್ಲಿ ಇ’ಸ್ಲಾಮಿಕ್ ಉ’ಗ್ರರು ದಾಳಿ ನಡೆಸಿದ್ದು, ಇಬ್ಬರು ಪೋಲೀಸರು ಹುತಾತ್ಮರಾದ ಬಗ್ಗೆ ವರದಿಯಾಗಿದೆ. ಶ್ರೀನಗರದ ಬಾರ್ಜುಲ್ಲಾ ಪ್ರದೇಶದಲ್ಲಿರುವ ‘ಶಿವಶಕ್ತಿ ಸ್ವೀಟ್ ಶಾಪ್’ ಬಳಿ ಬಂದಿಳಿದ ಉಗ್ರರು ಏಕಾಏಕಿ ಗುಂಡಿನ ಸುರಿಮಳೆ ಸುರಿಸಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲೇ ಪಹರೆ ಕಾಯುತ್ತಿದ್ದ ಪೋಲೀಸರು ಗುಂಡಿನ ದಾಳಿಗೆ ಸಿಲುಕಿದ್ದಾರೆ. ಗಂಭೀರವಾಗಿ ಗಾಯಗೊಂಡ ಪೋಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಪೋಲೀಸರು ಹುತಾತ್ಮರಾದ ಬಗ್ಗೆ ವರದಿಯಾಗಿದೆ.

ಇದೀಗ ದಾಳಿಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಕಪ್ಪು ಬಣ್ಣದ ಶಾಲ್ ಹಾಕಿಕೊಂಡು ಬಂದ ಉಗ್ರನೊಬ್ಬ ಶಾಲ್ ಒಳಗೆ ಮುಚ್ಚಿಟ್ಟಿದ ರೈಫಲ್ ಹೊರತೆಗೆದು ಗುಂಡು ಹಾರಿಸುತ್ತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಓರ್ವ ಶಂಕಿತನನ್ನು ವಶಕ್ಕೆ ಪಡೆದಿರುವ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಹಿಂದೂಗಳು, ಸಿಖ್ಖರು ಹಾಗೂ ಕಾಶ್ಮೀರೇತರರನ್ನು ಗುರಿಯಾಗಿಸಿ ಇ’ಸ್ಲಾಮಿಕ್ ಉ’ಗ್ರರು ಸತತ ದಾಳಿಯನ್ನು ನಡೆಸುತ್ತಿರೋದು ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇಂದು ನಡೆದ ದಾಳಿಯ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!