fbpx

ಹುಲಿ – ಎತ್ತಿನ ನಡುವೆ ಕಾಳಗ, ಮುಂದೇನಾಯಿತು ನೋಡಿ! ವೈರಲ್ ವಿಡಿಯೋ

ಆಹಾರಕ್ಕಾಗಿ ವ್ಯಾಘ್ರಗಳು ಬೇಟೆಯಾಡುವ ವೀಡಿಯೋವನ್ನು ನಾವು ಸಾಕಷ್ಟು ಬಾರಿ ನೋಡಿರುತ್ತೇವೆ. ಇದೀಗ ಇಂತಹದ್ದೇ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಡಿನಲ್ಲಿ ಏಕಾಂಗಿಯಾಗಿ ಸಾಗುತ್ತಿದ್ದ ಎಮ್ಮೆಯ ಮೇಲೆ ಹುಲಿಯೊಂದು ದಾಳಿ ಮಾಡಿರುವ ವೀಡಿಯೋ ಇದಾಗಿದೆ. ಟ್ವಿಟರ್ ಬಳಕೆದಾರ ಸಾಕೇತ್ ಎಂಬವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಅಭಯಾರಣ್ಯಕ್ಕೆ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಹುಲಿ ಬೇಟೆಯಾಡುವ ಸಂದರ್ಭದಲ್ಲಿ ಪ್ರವಾಸಿಗರು ಬೊಬ್ಬೆ ಹಾಕುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ.

ವಿಡಿಯೋ ನೋಡಿದ ಅನೇಕರು ಪ್ರವಾಸಿಗರ ವಿರುದ್ಧ ಕಿಡಿಕಾರಿದ್ದು, ಕಾಡಿಗೆ ಪ್ರವಾಸಕ್ಕೆ ತೆರಳುವಾಗ ಶಾಂತಿ, ಸಂಯಮದಿಂದ ವರ್ತಿಸುವಂತೆ ಬುದ್ದಿಮಾತು ಹೇಳಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

ಇದನ್ನೂ ಓದಿ:  ಮಾಲಿಕನನ್ನು ಹಿಂಬದಿ ಕೂರಿಸಿ ಸಖತ್ ಆಗಿ ಬೈಕ್ ಚಲಾಯಿಸಿದ ಶ್ವಾನ! ವೈರಲ್ ವಿಡಿಯೋ ನೋಡಿ

Watch Video

error: Content is protected !!