fbpx

ಬೇಟೆಯಾಡಲು ಬಂದ ಚಿರತೆಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಜಿಂಕೆ, ವೈರಲ್ ವಿಡಿಯೋ ನೋಡಿ

ಬೇಟೆಯಾಡಲು ಹೊಂಚು ಹಾಕಿ ಕುಳಿತಿದ್ದ ಚಿರತೆ ಕೈಗೆ ಸಿಗದೇ ಚಾಲಾಕಿ ಜಿಂಕೆ ಪರಾರಿಯಾದ ವಿಡಿಯೋ ವೈರಲ್ ಆಗಿದೆ. ಬೇಟೆಗಾಗಿ ಚಿರತೆ ತನ್ನ ದೇಹವನ್ನು ಕಲ್ಲಿನಂತೆ ಗೋಚರಿಸುವಂತೆ ಮಾಡಿ ರಸ್ತೆ ಮಧ್ಯೆ ಕುಳಿತಿತ್ತು.

ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಬಂದ ಜಿಂಕೆಗೆ ರಸ್ತೆಯಲ್ಲಿ ಇರೋದು ಚಿರತೆ ಎಂಬುದು ಮೊದಲಿಗೆ ತಿಳಿದಿರಲಿಲ್ಲ. ಸ್ವಲ್ಪ ಹತ್ತಿರ ಹೋಗುತ್ತಿದ್ದಂತೆ ಚಿರತೆಯ ಬಾಲ ಅಲ್ಲಾಡಿದ್ದು, ಜಿಂಕೆ ತಕ್ಷಣ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿಹೋಗಿದೆ.

ಘಟನೆ ನಡೆದಿರೋದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ. ಬೇಟೆಯಾಡಲು ಕಾಯುತ್ತ ಕುಳಿತಿದ್ದ ಚಿರತೆಯನ್ನು ನೋಡಿದ ಜಿಂಕೆ ಕ್ಷಣಾರ್ಧದಲ್ಲೇ ಮಾಯವಾಯಿತು.

ಇದನ್ನೂ ಓದಿ:  ಹೆಬ್ಬಾವನ್ನೇ ನುಂಗಿ ಹಾಕಿದ ಭಾರಿ ಗಾತ್ರದ ಕಾಳಿಂಗ ಸರ್ಪ! ಶಾಕಿಂಗ್ ವಿಡಿಯೋ ನೋಡಿ

ಬೇಟೆಯಾಡಲು ಕುಳಿತಿದ್ದ ಚಿರತೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ನಿರಾಸೆಯಿಂದ ಅತ್ತ ಇತ್ತ ನೋಡಿ, ಪೇಚು ಮೋರೆ ಹಾಕಿಕೊಂಡು ಅಲ್ಲಿಂದ ತೆರಳಿದೆ. ಈ ಅಪರೂಪದ ದೃಶ್ಯ ಸಫಾರಿಗರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.

Watch Video

error: Content is protected !!