fbpx

Please assign a menu to the primary menu location under menu

ರೈಲು ಹಾಗೂ ಹಳಿಯ ಮಧ್ಯೆ ಸಿಕ್ಕಿಹಾಕಿಕೊಂಡ ಮಹಿಳೆ! ಮುಂದೇನಾಯಿತು? ಇಲ್ಲಿದೆ ನೋಡಿ ವೈರಲ್ ವಿಡಿಯೋ

ರೈಲ್ವೇ ಹಳಿ ದಾಟುವಾಗ ಎಷ್ಟೇ ಎಚ್ಚರ ವಹಿಸಿದ್ರು ಸಾಲದು. ಪ್ರತಿವರ್ಷ ಅದೆಷ್ಟೋ ಜನ ರೈಲ್ವೆ ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾವಿಗೀಡಾಗುತ್ತಾರೆ. ಇದೀಗ‌ ಇಂತಹದದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳೆಯೊಬ್ಬರು ರೈಲ್ವೇ ಹಳಿ ದಾಟುವಾಗ ಏಕಾಏಕಿ ಬಂದ ರೈಲು ಆಕೆಯ ಮೇಲೆ ಹಾದುಹೋದ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುತ್ತೆ.

ಗೂಡ್ಸ್ ರೈಲು ಸಿಗ್ನಲ್ ಸಿಗದ ಕಾರಣ ರೈಲ್ವೇ ಗೇಟ್ ಬಳಿ ನಿಂತಿತ್ತು. ರೈಲು ಚಾಲಕ ಹೊರಡುವ ಸಿಗ್ನಲ್‌ಗಾಗಿ ಕಾಯುತ್ತಿದ್ದ. ಕೊನೆಗೂ ರೈಲಿಗೆ ಹೊರಡಲು ಸಿಗ್ನಲ್ ಸಿಕ್ಕಿದೆ‌. ರೈಲು ಚಾಲಕ ಇನ್ನೇನು ರೈಲು ಶುರು ಮಾಡಿ ಹೊರಡುವಷ್ಟರಲ್ಲಿ ಮಹಿಳೆಯೊಬ್ಬರು ರೈಲ್ವೇ ಹಳಿ ದಾಟಲು ಯತ್ನಿಸಿದ್ದಾರೆ.

ಮಹಿಳೆ ದಾಟಲು ಹಳಿಯ ಮಧ್ಯಕ್ಕೆ ಬರುತ್ತಿದ್ದಂತೆ ರೈಲು ಕೂಡ ವೇಗ ಹೆಚ್ಚಿಸಿಕೊಂಡು ಮಹಿಳೆಯಿದ್ದಲ್ಲಿಗೆ ಬಂದಿದೆ. ಮಹಿಳೆಗೆ ಏನು ಮಾಡಬೇಕೆಂದು ತೋಚದೆ ಹಳಿಯ ಮಧ್ಯೆ ಉದ್ದಕ್ಕೆ ಮಲಗಿಬಿಟ್ಟಿದ್ದಾಳೆ. ರೈಲು ಆಕೆಯ ಮೇಲೆಯೇ ಹಾದುಹೋಗಿದೆ.

ಗೂಡ್ಸ್ ರೈಲು ಬಹಳ‌ ಉದ್ದವಿದ್ದ ಕಾರಣ ಮಹಿಳೆ ರೈಲು ಸಂಪೂರ್ಣವಾಗಿ ಹಾದುಹೋಗುವವರೆಗೆ ಅಲ್ಲೇ ಮಲಗಿದ್ದಾಳೆ. ರೈಲು ಪೂರ್ತಿಯಾಗಿ ಹಾದುಹೋದ ಮೇಲೆ ಆಕೆ ಏನೂ ಆಗದೇ ಆರಾಮಾಗಿ ಎದ್ದು ಬಂದಿದ್ದಾಳೆ. ಸದ್ಯ 62 ವರ್ಷ ವಯಸ್ಸಿನ ಈ ಗಟ್ಟಿಗಿತ್ತಿ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Watch Video

error: Content is protected !!