fbpx

ನೋಡನೋಡುತ್ತಿದ್ದಂತೆ ಜೆಸಿಬಿ ಮೇಲೆ ಅಟ್ಯಾಕ್ ಮಾಡಿದ ಆನೆ! ಮುಂದೇನಾಯಿತು ನೋಡಿ, ವೈರಲ್ ವಿಡಿಯೋ

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಕಾಡಾನೆಯೊಂದು ಬಾರೀ ದಾಂಧಲೆ ನಡೆಸಿದೆ. ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ಕಾಡಾನೆಯೊಂದು ತನಗೆ ಅಡ್ಡ ಸಿಕ್ಕ ವಾಹನಗಳ ಮೇಲೆಲ್ಲ ದಾಳಿ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಗಜರಾಜ ರೈಲು ತಡೆಕಂಬಿ ಮುರಿಯಲು ಯತ್ನಿಸಿದೆ ಅಲ್ಲದೆ ಜೆಸಿಬಿ ಮೇಲೆ ಅಟ್ಯಾಕ್ ಮಾಡಿದೆ. ಹುಣಸೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆ ದಾಳಿ ನಡೆಸಿದ್ದು ಕಾರು, ಟ್ರ್ಯಾಕ್ಟರ್ ಜಖಂ ಆಗಿದೆ.

ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡಲು ಯತ್ನಿಸಿದ ಆನೆ, ಜೆಸಿಬಿ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಗ್ರಾಮದ ನಾಗೇಶ್ ಎಂಬುವರ ಜಮೀನಿನಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕಾಡಿನಿಂದ ಜಮೀನಿಗೆ ಬಂದ ಕಾಡಾನೆ, ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡಿ ಜೆಸಿಬಿಗೆ ಗುದ್ದಿದೆ.

ಇದನ್ನೂ ಓದಿ:  ಮಗುವಿನ ಸುತ್ತ ರಕ್ಷಣೆಗೆ ನಿಂತ ನಾಲ್ಕು ಕಾಳಿಂಗ ಸರ್ಪಗಳು! ಶಾಕಿಂಗ್ ವಿಡಿಯೋ ನೋಡಿ

ಆನೆ ದಾಳಿಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ತಮ್ಮ ಜೀಪ್‌ನ ಸೈರನ್‌ ಮಾಡುವ ಮೂಲಕ ಆನೆಗಳನ್ನು ನಾಗಪುರ ಹಾಡಿಯ ಮೂಲಕ ಅರಣ್ಯ ಪ್ರವೇಶಿಸುವಂತೆ ಮಾಡಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!