fbpx

ನಡುರಸ್ತೆಯಲ್ಲಿಯೇ ವಕೀಲ ದಂಪತಿಯನ್ನು ಅಟ್ಟಾಡಿಸಿ ಕೊಚ್ಚಿ ಕೊಂದ್ರು! ಬೆಚ್ಚಿಬೀಳಿಸುವ ವೀಡಿಯೋ ವೈರಲ್

ವೈಯಕ್ತಿಯ ದ್ವೇಷದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲಿಯೇ ವಕೀಲ ದಂಪತಿಯನ್ನು ಅಟ್ಟಾಡಿಸಿಕೊಂಡು ಭೀಕರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ತೆಲಂಗಾಣದ ಮಂಘಾನಿ ಹಾಗೂ ಪೆದ್ದಪಲ್ಲಿ ಪಟ್ಟಣಗಳ ನಡುವಿನ ಪ್ರಮುಖ ರಸ್ತೆಯಲ್ಲಿ ನಡೆದಿದೆ.

ವೈಯಕ್ತಿಕ ದ್ವೇಷದ ಕಾರಣಕ್ಕೆ ವಕೀಲ ದಂಪತಿಯನ್ನು ನಡು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಮಂಘಾನಿ ಹಾಗೂ ಪೆದ್ದಪಲ್ಲಿ ನಡುವಿನ ಮುಖ್ಯ ರಸ್ತೆಯಲ್ಲಿ ನಡೆದಿದ್ದು, ಘಟನೆಯ ಭೀಕರ ದೃಶ್ಯಗಳು ಈಗ ವೈರಲ್ ಆಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ತೆಲಂಗಾಣದ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ಗಟ್ಟು ವಾಮನ್ ರಾವ್ ಹಾಗೂ ಅವರ ಪತ್ನಿ ಪಿ.ವಿ.ನಾಗಮಣಿ ಕೊಲೆಯಾದವರು. ಈ ದಂಪತಿ ಕೆಲವೇ ದಿನಗಳ ಹಿಂದಷ್ಟೇ ತಮ್ಮ ಜೀವಕ್ಕೆ ಅಪಾಯವಿರೋ ಬಗ್ಗೆ ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಅಧಿಕೃತ ದೂರು ನೀಡಿದ್ದರು.

ತಮಗೆ ಕುಂಟಿ ಶ್ರೀನಿವಾಸ್ ಹಾಗೂ ಸಹಚರರಿಂದ ಪ್ರಾಣಾಪಾಯವಿದೆ ಎಂದು ಬುಧವಾರದಂದು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕೇವಲ ಅರ್ಧಗಂಟೆಯಲ್ಲಿ ಭೀಕರವಾಗಿ‌ ಹತ್ಯೆಯಾಗಿದ್ದಾರೆ. ಹತ್ಯೆಯ ಭೀಕರ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ದಂಪತಿಯನ್ನು ಅಟ್ಟಿಸಿಕೊಂಡು ಕೊಲೆ ಮಾಡಿರುವುದು ಈ ದೃಶ್ಯದಲ್ಲಿ ನೋಡಬಹುದಾಗಿದೆ.

ಗಂಭೀರ ಗಾಯಗೊಂಡಿದ್ದ ವಕೀಲ ದಂಪತಿಯನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ. ಮೃತ ದಂಪತಿ ಕರೊನಾ ಸಮಯದಲ್ಲಿ ಬಡವರಿಗೆ ಸಾಕಷ್ಟು ನೆರವು ನೀಡಿದ್ದರು ಎಂದು ತಿಳಿದುಬಂದಿದ್ದು, ದಂಪತಿಯ ಸಾವು ತುಂಬಾ ನೋವು ತಂದಿದೆ ಎಂದು ರಾಜ್ಯ ವಕೀಲರ ಸಂಘ ಸಂತಾಪ ವ್ಯಕ್ತಪಡಿಸಿದೆ. ಭೀಕರ ದಾಳಿಯ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!