fbpx

ಸೌಂದರ್ಯ ಹೆಚ್ಚಿಸಿಕೊಳ್ಳಲು ಪಾರ್ಲರ್‌ಗೆ ಹೋದ ಮಹಿಳೆಯ ಪರಿಸ್ಥಿತಿ ಏನಾಗಿದೆ ನೋಡಿ!

ಮಹಿಳೆಯರು ತಮ್ಮ ಸೌಂದರ್ಯ ಹೆಚ್ಚಿಸಲು ವಿವಿಧ ರೀತಿಯ ಸೌಂದರ್ಯವರ್ಧಕಗಳನ್ನು ಉಪಯೋಗಿಸುತ್ತಾರೆ. ಕೆಲವೊಮ್ಮೆ ಇದೇ ಸೌಂದರ್ಯವರ್ಧಕಗಳು ಅಡ್ಡಪರಿಣಾಮ ಬೀಳೋದು ಇದೆ. ಸೌದರ್ಯ ಹೆಚ್ಚಿಸಲು ಹೋಗಿ ಅಡ್ಡಪರಿಣಾಮ ಉಂಟಾದ ಪರಿಣಾಮ ಅನೇಕರು ಪಶ್ಚಾತಾಪ ಪಟ್ಟಿರೋದು ಇದೆ.

ಇದೀಗ ಮಹಿಳೆಯೊಬ್ಬರು ಪ್ರತಿಷ್ಠಿತ ಬ್ಯೂಟಿಪಾರ್ಲರ್‌ನಲ್ಲಿ ಉಂಟಾದ ಪ್ರಮಾದದಿಂದಾಗಿ ತಮ್ಮ ಮುಖದ ಸೌಂದರ್ಯವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ಪ್ರತಿಷ್ಠಿತ ‘ಕಾಯಾ ಯೂನಿಸೆಕ್ಸ್ ಪಾರ್ಲರ್’ಗೆ ಭೇಟಿ ನೀಡಿದ್ದ ಮಹಿಳೆಯ ಮುಖಕ್ಕೆ ಸ್ಟೀಮರ್‌ನಿಂದ ಕುದಿಯುವ ನೀರು ಸುರಿದ ಪರಿಣಾಮ ಮುಖ ಸುಟ್ಟುಕೊಂಡಿದ್ದಾರೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ.ಲಿಜಾ ದೇವಿಯವರು ತಮ್ಮ ಸಹೋದರಿಯ ಮದುವೆ ಸಂಭ್ರಮದಲ್ಲಿ ಭಾಗಿಯಾಗುವ ನಿಮಿತ್ತ ಪ್ರತಿಷ್ಠಿತ ‘ಕಾಯಾ ಯೂನಿಸೆಕ್ಸ್ ಪಾರ್ಲರ್’ಗೆ ಭೇಟಿ ನೀಡಿದ್ದಾರೆ. ಆದರೆ ಅಲ್ಲಿ ಕಡಿಮೆ ಗುಣಮಟ್ಟದ ಸ್ಟೀಮರ್ ಬಳಸಿದ ಕಾರಣ ಇವರ ಮುಖದ ಮೇಲೆ ಸ್ಟೀಮರ್‌ನಿಂದ ಬಿಸಿನೀರು ಸುರಿದ ಪರಿಣಾಮ ಮುಖ ಸುಟ್ಟುಹೋಗಿದೆ.

ಇದನ್ನೂ ಓದಿ:  ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಾಳಿಯಲ್ಲಿ ಹಾರಿದ ಬೈಕ್ ಸವಾರ! ಭೀಕರ ಅಪಘಾತದ ವಿಡಿಯೋ ನೋಡಿ

ಈ ಬಗ್ಗೆ ಮಾತನಾಡಿದ ಅವರು, ‘ಪಾರ್ಲರ್ ಸಿಬ್ಬಂದಿ ಕಡಿಮೆ ಗುಣಮಟ್ಟದ ಸ್ಟೀಮರ್ ಬಳಸಿದ ಪರಿಣಾಮ ನನ್ನ ಮುಖ ಸುಟ್ಟು ಹೋಗಿದ್ದು, ಸಂಪೂರ್ಣವಾಗಿ ಚೇತರಿಸಿಕೊಳ್ಳಲು 6ತಿಂಗಳಿಗೂ ಹೆಚ್ಚು ಸಮಯ ಬೇಕಾಗಬಹುದು. ಮುಖ ಸುಟ್ಟಿರುವ ಪರಿಣಾಮ ನಾನು ಮುಖಕ್ಕೆ ಮುಸುಕು ಧರಿಸಿ ಕರ್ತವ್ಯದಲ್ಲಿ ಭಾಗವಹಿಸಬೇಕಾಗಿ ಬಂದಿದೆ’ ಎಂದಿದ್ದಾರೆ.

‘ಇನ್ನು ಕೆಲವೇ ಸಮಯಗಳಲ್ಲಿ ಸಹೋದರಿಯ ಮದುವೆ ಇದ್ದು, ಅದರಲ್ಲಿ ಹೇಗೆ ಪಾಲ್ಗೊಳ್ಳಲಿ ಎಂಬ ಚಿಂತೆ ಎದುರಾಗಿದೆ. ನಿರ್ಲಕ್ಷ್ಯವಹಿಸಿ ನನ್ನ ಮುಖದ ಸೌಂದರ್ಯ ಹಾಳುಗೆಡವಿದ ಪಾರ್ಲರ್ ವಿರುದ್ಧ ಜಿಲ್ಲಾಧಿಕಾರಿ ಮತ್ತು ನ್ಯಾಯಾಲಯದ ಮುಂದೆ ದೂರು ದಾಖಲಿಸಲು ಸಜ್ಜಾಗಿದ್ದೇನೆ’ ಎಂದು ಹೇಳಿದ್ದಾರೆ.

error: Content is protected !!