ಮೊಸಳೆಗಳನ್ನು ಕಂಡರೆ ಸಾಕು ನಾವು ಭಯದಿಂದ ಮೈಲಿಗಟ್ಟಲೆ ದೂರ ಓಡಿ ಹೋಗುತ್ತೇವೆ. ಒಮ್ಮೆ ಅದರ ಬಾಯಿಯ ಬಿಗಿ ಹಿಡಿತಕ್ಕೆ ಸಿಕ್ಕರೆ ಮತ್ತೆ ಜೀವಂತವಾಗಿ ಬರುವ ಸಾಧ್ಯತೆ ಬಹಳ ಕಡಿಮೆ ಎಂಬುದು ಎಲ್ಲರಿಗೂ ಗೊತ್ತಿದೆ.
ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಯುವಕನೊಬ್ಬ ಮೊಸಳೆಯ ಬಾಲವನ್ನು ಹಿಡಿದು ನೀರಿನಿಂದ ಎಳೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ನಡೆದಿರೋದು ತಮಿಳುನಾಡಿನಲ್ಲಿ ಎಂದು ತಿಳಿದುಬಂದಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಯುವಕನೋರ್ವ ತಮಿಳುನಾಡಿನ ತಿರುಚಿ ಜಿಲ್ಲೆಯ ಮುಕ್ಕೊಂಬುವಿನಲ್ಲಿರುವ ಕಾವೇರಿ ನದಿಯಲ್ಲಿದ್ದ ಮೊಸಳೆಯ ಬಾಲವನ್ನು ಹಿಡಿದು ಎಳೆಯುವ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋ ನೋಡಿದ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಆರೋಪಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸಿದ್ದತೆ ನಡೆಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ವೈರಲ್ ಆಗಿರುವ ವಿಡಿಯೋ ಯಾವ ದಿನ ದೃಶ್ಯ ಸೆರೆ ಹಿಡಿಯಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ. ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,