ಪ್ರಾಣಿಗಳನ್ನು ನಾವು ಹೆಚ್ಚಾಗಿ ಕಾಡಿನಲ್ಲಿ ಹಾಗೂ ಪ್ರಾಣಿ ಸಂಗ್ರಹಾಲಯಗಳಲ್ಲಿ ನೋಡಿರುತ್ತೇವೆ. ಈ ಹಿಂದೆ ಸರ್ಕಸ್ಗಳಲ್ಲಿಯೂ ಪ್ರಾಣಿಗಳನ್ನು ಬಳಸಲಾಗುತ್ತಿತ್ತು, ಆದರೆ ಇದು ಪ್ರಾಣಿಪ್ರೀಯರ ಕೆಂಗಣ್ಣಿಗೆ ಗುರಿಯಾದ ನಂತರ ಬಹುತೇಕ ಕಡಿಮೆಯಾಗಿದೆ.
ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಟಿವಿ ಕಾರ್ಯಕ್ರಮವೊಂದಕ್ಕೆ ಸಿಂಹವನ್ನು ಕರೆತಂದು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದ್ದು ಟಿಆರ್ಪಿ ಹೆಚ್ಚಿಸುವ ಉದ್ದೇಶದಿಂದ ನೇರಪ್ರಸಾರದ ಟಿವಿ ಕಾರ್ಯಕ್ರಮವೊಂದಕ್ಕೆ ಆಯೋಜಕರು ಪಳಗಿಸಿದ ಸಿಂಹವನ್ನು ಕರೆತಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳ ಜೊತೆ ಪುಟ್ಟಮಗುವನ್ನು ಕೂಡ ಕರೆತರಲಾಗಿತ್ತು. ಕಾರ್ಯಕ್ರಮ ಶುರುವಾಗಿ ಕೆಲ ಸಮಯದವರೆಗೆ ಸಿಂಹ ಶಾಂತವಾಗಿ ವರ್ತಿಸಿದೆ. ಆದರೆ ಇದ್ದಕ್ಕಿದ್ದಂತೆ ಮಗು ಅಳಲು ಪ್ರಾರಂಭಿಸಿದ್ದು, ಇದನ್ನು ಗಮನಿಸಿದ ಸಿಂಹ ಮಗುವಿನ ಮೇಲೆ ದಾಳಿ ಮಾಡಿದೆ.
ಇದೇ ಸಂದರ್ಭದಲ್ಲಿ ಮಗು ಕಿರುಚಾಡಲು ಪ್ರಾರಂಭಿಸಿದೆ. ಅಲ್ಲಿದ್ದವರು ಸಿಂಹದ ಬಾಯಿಯಿಂದ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಸಿಂಹ ಮಗುವಿನ ಕಾಲನ್ನು ಗಟ್ಟಿಯಾಗಿ ಕಚ್ಚಿಕೊಂಡಿತ್ತು. ಕೊನೆಗೆ ಹೇಗೋ ಮಗುವನ್ನು ಸಿಂಹದ ಹಿಡಿತದಿಂದ ರಕ್ಷಿಸಲಾಗಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,
Watch Video
The rat that doesn’t give a damn anymore pic.twitter.com/dfiVQZUiWG
— The Dark Side Of Nature (@Darksidevid) December 26, 2020