fbpx

ತನ್ನ ಪುತ್ರಿಯ ಕೋಣೆಗೆ ಇಣುಕಿ ಕಾಟ ಕೊಡುತ್ತಿದ್ದ ಕಾಮುಕನಿಗೆ ಹಿಗ್ಗಾಮುಗ್ಗ ಜಾಡಿಸಿದ ತಾಯಿ! ವೈರಲ್ ವೀಡಿಯೋ ನೋಡಿ

ತಾಯಿ ದೇವರಿಗೆ ಸಮಾನ. ತನ್ನ ಮಕ್ಕಳ ರಕ್ಷಣೆಗಾಗಿ ಆಕೆ ಎಂತಹಾ ತ್ಯಾಗಕ್ಕೂ ಸಿದ್ಧಳಾಗಿರುತ್ತಾಳೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತನ್ನ ಹದಿಹರೆಯದ ಮಗಳಿಗೆ ಕಾಟ ಕೊಡುತ್ತಿದ್ದ ಯುವಕನನ್ನು ಮಹಿಳೆಯೊಬ್ಬರು ಹಿಡಿದು ಹಿಗ್ಗಾಮುಗ್ಗಾ ಜಾಡಿಸಿದ ವೀಡಿಯೋ ಇದಾಗಿದೆ. ಮಗಳ ಕೋಣೆಗೆ ಇಣುಕುತ್ತಿದ್ದ ಕಾಮುಕ ಯುವಕನನ್ನು ಹಿಡಿದ ಆಕೆಯ ತಾಯಿ ನೆಲಕ್ಕುರುಳಿಸಿ ತಕ್ಕ ಶಾಸ್ತಿ ಮಾಡಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಕಳೆದ ಜನವರಿ 31 ರಂದು ಅಮೇರಿಕಾದ ಟೆಕ್ಸಾಸ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಅಂಗಡಿಗೆ ಹೋಗಿ ಮರಳುವ ಸಂದರ್ಭದಲ್ಲಿ ಯುವಕನೊಬ್ಬ ತನ್ನ 15 ವರ್ಷದ ಮಗಳು ಮಲಗುವ ಕೋಣೆ ಇಣುಕುತ್ತಿರುವುದನ್ನು ನೋಡಿದ್ದಾರೆ. ಆ ಸಮಯದಲ್ಲಿ ಬಾಲಕಿ ಕೋಣೆಯಲ್ಲಿ ಇರಲಿಲ್ಲ.

ಆದರೂ ಯುವಕ ಕೋಣೆಯ ಕಿಟಕಿಯ ಬಳಿ ನಿಂತುಕೊಂಡು ಇಣುಕೋದನ್ನು ಮುಂದುವರೆಸಿದ್ದ. ಇದನ್ನ ಗಮನಿಸಿದ ಮಹಿಳೆ ತಕ್ಷಣ ಪೋಲೀಸರಿಗೆ ಕರೆಮಾಡಿ ವಿಷಯ ತಿಳಿಸಿದ್ದು, ಪೋಲೀಸರು ಬರುವಷ್ಟರಲ್ಲಿ ಯುವಕ ಅಲ್ಲಿಂದ ಓಡಲು ಯತ್ನಿಸಿದ್ದಾನೆ.

ತಕ್ಷಣ ಮಹಿಳೆ ಆತನನ್ನು ಬೆನ್ನಟ್ಟಿ ಹಿಡಿದು ಪೋಲೀಸರು ಬರೋವರೆಗು ಹಾಗೆಯೇ ಹಿಡಿದಿಟ್ಟುಕೊಂಡು ಪೋಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಬಂದ ಲೇಕ್ ಜಾಕ್ಸನ್ ಪೊಲೀಸರು ಕಾಮುಕ ಯುವಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!