ಪ್ರಾಣಿಗಳು ಮನುಷ್ಯರ ಜೊತೆ ತುಂಟಾಟ ಆಡುವ ಸಾಕಷ್ಟು ವೀಡಿಯೋಗಳನ್ನು ನಾವು ಸಾಮಾಜಿಕ ತಾಲತಾಣಗಳಲ್ಲಿ ನೋಡಿರುತ್ತೇವೆ. ಇದೀಗ ಇಂತಹದ್ದೆ ವಿಡಿಯೋವೊಂದು ಟ್ವಿಟರ್ನಲ್ಲಿ ವೈರಲ್ ಆಗಿದೆ.
ಅಮೆರಿಕದ ಖ್ಯಾತ ಬ್ಯಾಸ್ಕೆಟ್ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಸಖತ್ ಟ್ರೆಂಡ್ ಆಗಿದೆ. ಆನೆಯೊಂದು ಮಹಿಳೆಯೊಬ್ಬರ ಜೊತೆ ತುಂಟಾಟವಾಡುತ್ತಿರುವ ವಿಡಿಯೋ ಇದಾಗಿದೆ.
ಮಹಿಳೆಯೊಬ್ಬರು ಆನೆಯೊಂದರ ಬಳಿ ನಿಂತು ಫೋಟೋಗೆ ಪೋಸು ನೀಡುತ್ತಿರುತ್ತಾರೆ. ಈ ವೇಳೆ ಆನೆ ಮಹಿಳೆಯ ತಲೆಯ ಮೇಲಿದ್ದ ಟೋಪಿಯನ್ನು ಮೆಲ್ಲನೆ ತನ್ನ ಸೊಂಡಿಲಿನ ಮೂಲಕ ತೆಗೆದುಕೊಂಡು ತನ್ನ ಬಾಯಿಯೊಳಗೆ ಇಟ್ಟುಕೊಳ್ಳುತ್ತದೆ.
ಮಹಿಳೆ ತನ್ನ ಟೋಪಿಯನ್ನು ಮರಳಿ ಕೊಡುವಂತೆ ಆನೆಯ ಬಳಿ ವಿನಂತಿಸಿಕೊಂಡ ಕೆಲ ಕ್ಷಣಗಳ ಬಳಿಕ ಆನೆ ತನ್ನ ಬಾಯಿಯೊಳಗೆ ಅಡಗಿಸಿದ್ದ ಟೋಪಿಯನ್ನು ಮರಳಿ ಮಹಿಳೆಗೆ ನೀಡುತ್ತದೆ.
ರೆಕ್ಸ್ ಚಾಪ್ಮನ್ ಶೇರ್ ಮಾಡಿರುವ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ವಿಡಿಯೋವನ್ನು ನೋಡಿ ಕೆಲವರು ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡಿದ್ದರೆ ಇನ್ನೂ ಕೆಲವರು ವಿಡಿಯೋ ವಿರುದ್ಧ ಹರಿಹಾಯ್ದಿದ್ದಾರೆ. ವನ್ಯಜೀವಿ ಆನೆಗಳನ್ನು ಈ ರೀತಿ ವರ್ತಿಸುವಂತೆ ಪಳಗಿಸಲು ಅವಕ್ಕೆ ಸಾಕಷ್ಟು ಚಿತ್ರಹಿಂಸೆ ನೀಡಲಾಗುತ್ತದೆ. ಇದು ಸರಿಯಲ್ಲ ಎಂದು ಕಮೆಂಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ.
Watch Video
Timeline cleanser:
An elephant playing a joke on a lady. They’re so brilliant… pic.twitter.com/T3ySSxAWoz
— Rex Chapman🏇🏼 (@RexChapman) February 10, 2021