fbpx

ಸಿಂಹಗಳ ಗುಂಪಿನ ಜೊತೆ ಕಾದಾಡಿ ತನ್ನ ಕರುವನ್ನು ರಕ್ಷಿಸಿದ ಕಾಡೆಮ್ಮೆ! ವೈರಲ್ ವಿಡಿಯೋ ನೋಡಿ

ಮನುಷ್ಯರು ಹೇಗೆ ತಮ್ಮ ಮಕ್ಕಳ ಮೇಲೆ ಪ್ರೀತಿ, ಕಾಳಜಿ ಹೊಂದಿರುತ್ತಾರೋ, ಪ್ರಾಣಿಗಳು ಕೂಡ ಅದೇ ರೀತಿ ತಮ್ಮ ಮಕ್ಕಳ ಮೇಲೆ ಕಾಳಜಿ ಹೊಂದಿರುತ್ತವೆ. ತಮ್ಮ ಮಕ್ಕಳಿಗೆ ಏನಾದರೂ ತೊಂದರೆ ಉಂಟಾಗಲಿದೆ ಎಂದು ತಿಳಿದರೆ ಸಾಕು ತಕ್ಷಣ ತಮ್ಮ ಪ್ರಾಣ ಪಣಕ್ಕಿಟ್ಟಾದರೂ ತಮ್ಮ ಮಕ್ಕಳ ರಕ್ಷಣೆಗೆ ಮುಂದಾಗುತ್ತವೆ.

ಕಾಡೆಮ್ಮೆಯೊಂದು ತನ್ನ ಕರುವಿನ ಮೇಲೆ ದಾಳಿ ಮಾಡಿದ ಸಿಂಹಗಳ ಗುಂಪಿನ ಜೊತೆ ಕಾದಾಡಿ ಕರುವನ್ನು ರಕ್ಷಣೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಆಗ ತಾನೆ ಜನ್ಮ ನೀಡಿದ್ದ ಕರುವಿನ ಮೇಲೆ ಸಿಂಹಗಳ ಗುಂಪು ದಾಳಿ ಮಾಡಿದ್ದು, ತಾಯಿ ಕಾಡೆಮ್ಮೆ ತನ್ನ ಪ್ರಾಣ ಪಣಕ್ಕಿಟ್ಟು ತನ್ನ ಮರಿಯನ್ನು ಸಿಂಹಗಳ ಗುಂಪಿನಿಂದ ರಕ್ಷಿಸಿದೆ‌. ವನ್ಯಜೀವಿ ಛಾಯಾಗ್ರಾಹಕರ ಕ್ಯಾಮರಾ ಕಣ್ಣಿಗೆ ಈ ದೃಶ್ಯ ಸೆರೆಯಾಗಿದೆ.

ವಿಡಿಯೋದಲ್ಲಿ ತಾಯಿ ಕಾಡೆಮ್ಮೆ ಕರುವಿಗೆ ಜನ್ಮ ನೀಡೋದು, ಸಿಂಹಗಳು ಕರುವಿನ ಮೇಲೆ ದಾಳಿ ಮಾಡೋದು, ಸಿಂಹಗಳ ಜೊತೆ ತಾಯಿ ಕಾಡೆಮ್ಮೆ ಕಾದಾಡಿ ಮರಿಯನ್ನು ರಕ್ಷಣೆ ಮಾಡಿರೋದು ಕಾಣಬಹುದಾಗಿದೆ. ಮೊದಲಿಗೆ ತಾಯಿ ಕಾಡೆಮ್ಮೆ ಏಕಾಂಗಿಯಾಗಿ ಸಿಂಹಗಳ ಜೊತೆ ಹೋರಾಟ ಮಾಡಿ ಮರಿಯನ್ನು ರಕ್ಷಣೆ ಮಾಡಿದ್ದು, ನಂತರ ಇತರ ಕಾಡೆಮ್ಮೆಗಳು ಅದಕ್ಕೆ ಸಾಥ್ ನೀಡಿದೆ.

Watch Video

video

error: Content is protected !!