ಜವರಾಯ ಯಾವ ರೀತಿಯಲ್ಲಿ ಬಂದು ಅಟ್ಟಹಾಸ ಮೆರೆಯುತ್ತಾನೆ ಹೇಳಲು ಅಸಾಧ್ಯ. ಕೆಲ ವಾರಗಳ ಹಿಂದೆಯಷ್ಟೇ ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದ ಮಾಜಿ ಯೋಧರೊಬ್ಬರ ಮೇಲೆ ಮರದ ಕೊಂಬೆ ತುಂಡಾಗಿ ಬಿದ್ದು ದಾರುಣವಾಗಿ ಸಾವಿಗೀಡಾದ ಘಟನೆ ಸಕಲೇಶಪುರದಲ್ಲಿ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ.
ಇದೀಗ ಇಂತಹದ್ದೇ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬಳು ಜವರಾಯನ ಬಲೆಯಿಂದ ಸ್ವಲ್ಪದರಲ್ಲೇ ಪಾರಾಗಿ ಜೀವ ಉಳಿಸಿಕೊಂಡ ಶಾಕಿಂಗ್ ವಿಡಿಯೋ ಇದಾಗಿದೆ.
ಮಹಿಳೆಯೊಬ್ಬಳು ಮರದಡಿಯಲ್ಲಿ ವಿಶ್ರಾಂತಿ ಪಡೆಯುತ್ತಾ ಪುಸ್ತಕ ಓದುವುದರಲ್ಲಿ ಮಗ್ನಳಾಗಿದ್ದರೆ, ಆಕೆಯ ಮಕ್ಕಳು ಅಲ್ಲೇ ಪಕ್ಕದ ಕೊಳದಲ್ಲಿ ಈಜು ಹೊಡೆಯುತ್ತಾ ಎಂಜಾಯ್ ಮಾಡ್ತಾ ಇದ್ದರು. ಇದೇ ಸಂದರ್ಭದಲ್ಲಿ ಏಕಾಏಕಿ ಮರದ ಕೊಂಬೆ ಮುರಿದು ಮಹಿಳೆ ವಿಶ್ರಾಂತಿ ಪಡೆಯುತ್ತಿದ್ದ ಆಸನದ ಮೇಲೆ ಬಿದ್ದಿದೆ.
ಮಹಿಳೆಯ ಆಯಸ್ಸು ಗಟ್ಟಿಯಿತ್ತು, ಕೊಂಬೆ ಮುರಿಯುವ ಸದ್ದುಕೇಳಿ ಅಪಾಯ ಅರಿತ ಮಹಿಳೆ ತಡಮಾಡದೆ ಅಲ್ಲಿಂದ ಓಡಿದ್ದಾಳೆ. ಮಹಿಳೆ ಓಡಿದ ಕೆಲ ಸೆಕೆಂಡುಗಳಲ್ಲೆ ಬೃಹತ್ ಕೊಂಬೆ ಆಕೆ ಕೂತಿದ್ದ ಆಸನದ ಮೇಲೆ ಮುರಿದು ಬಿದ್ದಿದೆ.
ಮಹಿಳೆಯ ಸಮಯಪ್ರಜ್ಞೆ ಆಕೆಯ ಜೀವವನ್ನು ಉಳಿಸಿದೆ. ಆಕೆ ಸ್ವಲ್ಪ ತಡಮಾಡಿದ್ದರೂ ಆ ಕೊಂಬೆ ಆಕೆಯ ಮೇಲೆ ಬಿದ್ದು ಆಕೆ ಬದುಕುಳಿಯುವ ಯಾವುದೇ ಸಾಧ್ಯತೆ ಇರಲಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡಿದವರ ಎದೆಬಡಿತ ಹೆಚ್ಚಿಸದೆ ಇರದು. ವಿಡಿಯೋ ನೋಡಿ,
Watch Video
