ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಎಷ್ಟು ಎಚ್ಚರವಹಿಸಿದ್ರೂ ಸಾಲದು. ಸ್ವಲ್ಪ ಗಮನ ತಪ್ಪಿದ್ರೂ ಬಾರೀ ಅನಾಹುತ ನಡೆದುಬಿಡುತ್ತೆ. ಇಂತಹದ್ದೇ ಘಟನೆಯ ವಿಡಿಯೋವೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಬಜ್ಪೆಯಲ್ಲಿ ಟಿಪ್ಪರ್ ಹಾಗೂ ದ್ವಿಚಕ್ರ ವಾಹನದ ಮದ್ಯೆ ನಡೆದ ಅಪಘಾತದ ದೃಶ್ಯ ಇದಾಗಿದ್ದು, ದ್ವಿಚಕ್ರ ವಾಹನ ಸವಾರ ಮಾಡಿದ ಎಡವಟ್ಟಿಗೆ ಹಿಂಬದಿ ಕೂತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಖ್ಯರಸ್ತೆಯಲ್ಲಿ ಟಿಪ್ಪರ್ ಬರೋದನ್ನು ಗಮನಿಸಿಯೂ ದ್ವಿಚಕ್ರ ವಾಹನ ಸವಾರ ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ವಾಹನ ನುಗ್ಗಿಸಿದ್ದಾನೆ. ಈ ಸಂದರ್ಭದಲ್ಲಿ ಟಿಪ್ಪರ್ ಬಂದು ದ್ವಿಚಕ್ರ ವಾಹನಕ್ಕೆ ಬಡಿದಿದ್ದು, ಇಬ್ಬರೂ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.
ದ್ವಿಚಕ್ರ ವಾಹನದ ಹಿಂಬದಿ ಕೂತಿದ್ದ ಮಹಿಳೆಯ ತಲೆ ರಸ್ತೆಗೆ ಬಡಿದ ಪರಿಣಾಮ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪ್ಪರ್ ಚಾಲಕ ಒಂದು ವೇಳೆ ಕೂಡಲೇ ಬ್ರೇಕ್ ಹಾಕದೆ ಹೋಗಿದ್ದರೆ ದ್ವಿಚಕ್ರ ವಾಹನ ಸವಾರರು ಚಕ್ರದಡಿಗೆ ಸಿಲುಕುತ್ತಿದ್ದರು. ಸದ್ಯ ಘಟನೆಯ ದೃಶ್ಯಗಳು ಹತ್ತಿರದ ಕಟ್ಟಡದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Watch Video
